ಆರ್ ಸಿಬಿ ಮಹಿಳಾ ತಂಡಕ್ಕೆ ಸ್ಮೃತಿ ಮಂಧನಾ ನಾಯಕಿ

ಶನಿವಾರ, 18 ಫೆಬ್ರವರಿ 2023 (09:59 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಕ್ಕೆ ಸ್ಮೃತಿ ಮಂಧನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಮಾರ್ಚ್ 5 ರಿಂದ ಮಹಿಳಾ ಐಪಿಎಲ್ ಆರಂಭವಾಗಲಿದ್ದು, ಮೊನ್ನೆಯಷ್ಟೇ ಹರಾಜು ಪ್ರಕ್ರಿಯೆ ನಡೆದಿತ್ತು. ಸ್ಮೃತಿ ಮಂಧನಾ ದಾಖಲೆಯ 3.4 ಕೋಟಿ ರೂ.ಗೆ ಆರ್ ಸಿಬಿ ತಂಡದ ಪಾಲಾಗಿದ್ದರು.

ಮಹಿಳಾ ಕ್ರಿಕೆಟ್ ನ ಕ್ವೀನ್ ಎಂದೇ ಚಿರಪರಿಚಿತರಾಗಿರುವ ಮಂಧನಾ ಪುರುಷರ ಕ್ರಿಕೆಟ್ ನ ಕಿಂಗ್ ಕೊಹ್ಲಿಯಂತೇ 18 ಸಂಖ್ಯೆ ಜೆರ್ಸಿ ಧರಿಸುತ್ತಾರೆ. ಹೀಗಾಗಿ ಆರ್ ಸಿಬಿ ಇದನ್ನೇ ಉಲ್ಲೇಖಿಸಿ ಟ್ವೀಟ್ ಮಾಡಿದೆ. ವಿಶೇಷವೆಂದರೆ ಮಂಧನಾರನ್ನು ನಾಯಕಿಯಾಗಿ ಪುರುಷರ ತಂಡದ ನಾಯಕ ಫಾ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಘೋಷಣೆ ಮಾಡಿದ್ದು, ಆರ್ ಸಿಬಿ ಮಹಿಳಾ ತಂಡಕ್ಕೆ ಸ್ವಾಗತ ಕೋರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ