ಅವಕಾಶ ನಿರಾಕರಣೆ: ಮೆಲ್ಬರ್ನ್ ಮೈದಾನ ಬಿಟ್ಟು ತೆರಳಿದ ಮುಸ್ತಾಫಾ ಕಮಲ್

ಮಂಗಳವಾರ, 31 ಮಾರ್ಚ್ 2015 (10:42 IST)
ವಿಶ್ವಕಪ್ ಚಾಂಪಿಯನ್ನರಿಗೆ ವಿಶ್ವಕಪ್ ಟ್ರೋಫಿ ಹಸ್ತಾಂತರಿಸಲು ಅವಕಾಶ ನೀಡದಿದ್ದರಿಂದ ಕೋಪಗೊಂಡ ಐಸಿಸಿ ಅಧ್ಯಕ್ಷ ಮುಸ್ತಾಫಾ ಕಮಲ್ ಫೈನಲ್ ಪಂದ್ಯ ಮುಗಿಯುವ ಮುನ್ನವೇ ಮೆಲ್ಬರ್ನ್ ಕ್ರಿಕೆಟ್ ಮೈದಾನ ಬಿಟ್ಟು ತೆರಳಿದರೆಂದು ತಿಳಿದುಬಂದಿದೆ.  ಆಗ ಐಸಿಸಿ ಅಧ್ಯಕ್ಷ ಎನ್. ಶ್ರೀನಿವಾಸನ್ ಚಾಂಪಿಯನ್ ತಂಡದ ನಾಯಕ ಮೈಕೆಲ್ ಕ್ಲಾರ್ಕ್ ಅವರಿಗೆ ಟ್ರೋಫಿಯನ್ನು ಹಸ್ತಾಂತರಿಸಿದರು. 
 
 
ವಿಶ್ವಸನೀಯ ಮೂಲಗಳ ಪ್ರಕಾರ, ಶನಿವಾರ ನಡೆದ ಐಸಿಸಿ ಸಭೆಯಲ್ಲಿ ಕಮಲ್ ಅವರಿಗೆ ಟ್ರೋಫಿಯನ್ನು ಹಸ್ತಾಂತರಿಸಲು ಅವಕಾಶ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಲಾಗಿತ್ತು.  ಅಂಪೈರಿಂಗ್ ಪಕ್ಷಪಾತದ ಬಗ್ಗೆ ಕಮಲ್ ತಮ್ಮ ಧ್ವನಿ ಎತ್ತಿದ್ದರಿಂದ ಶ್ರೀನಿವಾಸನ್ ತೀವ್ರ ಬೇಸರಗೊಂಡಿದ್ದರು.  ರುಬೆಲ್ ಹುಸೇನ್ ಎಸೆತದಲ್ಲಿ ರೋಹಿತ್ ಶರ್ಮಾ ಅವರಿಗೆ ನಾಟೌಟ್ ನೀಡಿದ್ದರಿಂದ ಕಮಲ್ ಅಂಪೇರ್ ಪಕ್ಷಪಾತದಿಂದ ಔಟ್ ಕೊಡಲಿಲ್ಲ ಎಂದು ದೂರಿದ್ದರು. 
 
ಬಾಂಗ್ಲಾ ದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿರುವ ಕಮಲ್ ಭಾರತ ತೋರಿಸಿದ ತನ್ನ ಪ್ರಭಾವದಿಂದಾಗಿ ಅಂಪೈರಿಂಗ್ ಪಕ್ಷಪಾತಕ್ಕೆ ಎಡೆಯಾಯಿತು ಎಂದು ಹೇಳಿದ್ದರು. ಇವರ ಹೇಳಿಕೆಯಿಂದ ಶ್ರೀನಿವಾಸನ್ ಅಸಮಾಧಾನಗೊಂಡಿದ್ದರು. ಶ್ರೀನಿವಾಸನ್ ಬಹಿರಂಗವಾಗಿ ಏನನ್ನೂ ಹೇಳದಿದ್ದರೂ ಮಂಡಳಿ ಸದಸ್ಯರ ಎದುರು ತಮ್ಮ ಅತೃಪ್ತಿಯನ್ನು ಸೂಚಿಸಿ ಕಮಲ್ ಕೇವಲ ಒಂದು ತಪ್ಪು ಅಂಪೈರಿಂಗ್ ತೀರ್ಪಿನ ಕಡೆ ಬೊಟ್ಟು ಮಾಡಿ ಅದನ್ನು ಪ್ರತ್ಯೇಕ ಪ್ರಕರಣವಾಗಿ ಹೇಗೆ ತೆಗೆದುಕೊಂಡರು ಎಂದು ಪ್ರಶ್ನಿಸಿದ್ದರು. 
 

ವೆಬ್ದುನಿಯಾವನ್ನು ಓದಿ