ಡಿನ್ನರ್, ಗಾಲ್ಫ್ ಆಡಲು ಅವಕಾಶ ಕೊಡಿ: ಐಪಿಎಲ್ ಆಟಗಾರರ ಪರ ಫ್ರಾಂಚೈಸಿಗಳ ಆಗ್ರಹ

ಗುರುವಾರ, 6 ಆಗಸ್ಟ್ 2020 (10:06 IST)
ಮುಂಬೈ: ಐಪಿಎಲ್ 13 ನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಯುಎಇಗೆ ತೆರಳಲಿರುವ ಆಟಗಾರರಿಗೆ ಬಿಸಿಸಿಐ ಕೆಲವು ನೀತಿ ನಿಯಮಗಳನ್ನು ರೂಪಿಸಿದೆ. ಆದರೆ ಈ ನಿಯಮಗಳಲ್ಲಿ ಕೆಲವು ಬದಲಾವಣೆ ತರಲು ಫ್ರಾಂಚೈಸಿಗಳು ಆಗ್ರಹಿಸಿದ್ದಾರೆ.


ಯುಎಇಗೆ ಬಂದಿಳಿದ ಕೂಡಲೇ ಆರು ದಿನಗಳ ಕಡ್ಡಾಯ ಕ್ವಾರಂಟೈನ್ ಗೊಳಗಾಗಬೇಕು. ಆರನೇ ದಿನದವರೆಗೆ ಮೂರು ಬಾರಿ ಕೊರೋನಾ ಪರೀಕ್ಷೆಗೊಳಗಾಗಬೇಕು. ಅದಾದ ಬಳಿಕವೇ ತರಬೇತಿಯಲ್ಲಿ ಪಾಲ್ಗೊಳ್ಳಬೇಕು ಎಂದು ನಿಯಮ ರೂಪಿಸಲಾಗಿದೆ.

ಆದರೆ ಆಟಗಾರರು ಹಾಗೂ ಫ್ರಾಂಚೈಸಿಗಳು ಕ್ವಾರಂಟೈನ್ ಅವಧಿಯನ್ನು ಮೂರು ದಿನಗಳಿಗೆ ಕಡಿತಗೊಳಿಸಿ, ಕುಟುಂಬದ ಜತೆ ಮುಂಗಡವಾಗಿ ತಿಳಿಸಿ ಡಿನ್ನರ್ ಗೆ ತೆರಳುವುದು, ಗಾಲ್ಫ್ ಮತ್ತಿತರ ಔಟ್ ಡೋರ್ ಗೇಮ್ ಆಡಲು ಅವಕಾಶ ನೀಡುವುದು ಇತ್ಯಾದಿ ಸೌಲಭ್ಯ ನೀಡಬೇಕೆಂದು ಆಗ್ರಹಿಸಿದ್ದಾರೆ. ಇದಕ್ಕೆ ಐಪಿಎಲ್ ಆಡಳಿತ ಮಂಡಳಿ ಯಾವ ರೀತಿ ಪ್ರತಿಕ್ರಿಯಿಸುತ್ತದೆ ನೋಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ