ಟೀಕೆಗಳ ಬೆನ್ನಲ್ಲೇ ಐಪಿಎಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದ ಚೀನಾದ ವಿವೊ ಸಂಸ್ಥೆ

ಮಂಗಳವಾರ, 4 ಆಗಸ್ಟ್ 2020 (17:14 IST)
ಮುಂಬೈ: ಐಪಿಎಲ್ ನಲ್ಲಿ ಚೀನಾ ಮೂಲದ ಕಂಪನಿಗಳ ಪ್ರಾಯೋಜಕತ್ವಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಪ್ರಮುಖ ಸ್ಪಾನ್ಸರ್ ವಿವೊ ಸಂಸ್ಥೆ ತಾತ್ಕಾಲಿಕವಾಗಿ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ.


ಐದು ವರ್ಷಗಳಿಗೆ 440 ಕೋಟಿ ರೂ.ಗಳಿಗೆ ವಿವೋ ಐಪಿಎಲ್ ಪ್ರಾಯೋಜಕತ್ವದ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈಗ ಉಭಯ ದೇಶಗಳ ನಡುವೆ ಸಂಬಂಧ ಹಳಸಿದ್ದು, ವಿವೋ ಪ್ರಾಯೋಜಕತ್ವದ ಹಿನ್ನಲೆಯಲ್ಲಿ ಅಭಿಮಾನಿಗಳು ಐಪಿಎಲ್ ನ್ನೇ ಬಹಿಷ್ಕರಿಸಲು ತೀರ್ಮಾನಿಸಿದ್ದರು.

ಇದೀಗ ವಿವೋ ಸಂಸ್ಥೆ ಪ್ರಾಯೋಜಕತ್ವದಿಂದ ಹಿಂದೆ ಸರಿದ ಹಿನ್ನಲೆಯಲ್ಲಿ ಐಪಿಎಲ್ ಗೆ ಹೊಸ ಪ್ರಾಯೋಜಕತ್ವದ ಅಗತ್ಯವಿದೆ. ಆ ಸಂಸ್ಥೆ ಯಾವುದು ಎಂದು ಸದ್ಯದಲ್ಲೇ ತಿಳಿದುಬರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ