ಐಪಿಎಲ್ 14: ಮೊಹಮ್ಮದ್ ಸಿರಾಜ್ ಮೇಲೆ ಸಿಟ್ಟಿಗೆದ್ದ ವಿರಾಟ್ ಕೊಹ್ಲಿ

ಗುರುವಾರ, 7 ಅಕ್ಟೋಬರ್ 2021 (10:10 IST)
ದುಬೈ: ಐಪಿಎಲ್ 14 ರ ನಿನ್ನೆಯ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ, ಫೀಲ್ಡಿಂಗ್ ಮಾಡುತ್ತಿದ್ದ ಮೊಹಮ್ಮದ್ ಸಿರಾಜ್ ಮೇಲೆ ಮೈದಾನದಲ್ಲೇ ಸಿಟ್ಟಿಗೆದ್ದಿದ್ದಾರೆ.


ಹೈದರಾಬಾದ್ ಬ್ಯಾಟ್ಸ್ ಮನ್ ಅಭಿಷೇಕ್ ಹೊಡೆದ ಚೆಂಡು ಕ್ಯಾಚ್ ಆಗುವ ಸಾಧ‍್ಯತೆಯಿತ್ತು. ಆದರೆ ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಮೊಹಮ್ಮದ್ ಸಿರಾಜ್ ಓಡಿ ಬಂದು ಕ್ಯಾಚ್ ಹಿಡಿಯುವಲ್ಲಿ ವಿಫಲರಾದರು.

ಇದರಿಂದ ಸಿಟ್ಟಿಗೆದ್ದ ವಿರಾಟ್ ಕೊಹ್ಲಿ ಕೈ ಸನ್ನೆ ಮಾಡಿ ಸಿರಾಜ್ ರತ್ತ ಕಿಡಿ ಕಾರಿದ್ದಾರೆ. ಈ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನು, ಅದೇ ಓವರ್ ನಲ್ಲಿ ಅಭಿಷೇಕ್ ಔಟಾಗಿದ್ದು ವಿಶೇಷ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ