ಐಪಿಎಲ್ 14: ರಾಯಲ್ ಚಾಲೆಂಜರ್ಸ್ ಗೆ ಇಂದು ಔಪಚಾರಿಕ ಪಂದ್ಯ

ಬುಧವಾರ, 6 ಅಕ್ಟೋಬರ್ 2021 (09:06 IST)
ದುಬೈ: ಐಪಿಎಲ್ 14 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮತ್ತೊಂದು ಲೀಗ್ ಪಂದ್ಯವಾಡಲಿದೆ.


ಈ ಪಂದ್ಯ ಆರ್ ಸಿಬಿ ಪಾಲಿಗೆ ಔಪಚಾರಿಕವಾಗಲಿದೆ. ಈಗಾಗಲೇ ಮೂರನೇ ತಂಡವಾಗಿ ಪ್ಲೇ ಆಫ್ ಹಂತಕ್ಕೇರಿರುವ ಆರ್ ಸಿಬಿಗೆ ಈ ಪಂದ್ಯದ ಫಲಿತಾಂಶ ಹೆಚ್ಚಿನ ಪರಿಣಾಮ ಬೀರದು. ಹೀಗಾಗಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಹೊಸಬರಿಗೆ ಅವಕಾಶ ನೀಡುವ ಸಾಧ‍್ಯತೆಯಿದೆ.

ಅತ್ತ ಸನ್ ರೈಸರ್ಸ್ ಹೈದರಾಬಾದ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆದ್ದರೂ ಅದಕ್ಕೆ ಮುಂದಿನ ಹಂತಕ್ಕೆ ಅವಕಾಶವಿಲ್ಲ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ