ಐಪಿಎಲ್ 2016ರ ಫೈನಲ್ ಟಿಕೆಟ್‌ಗಳು 2 ಗಂಟೆಗಳಲ್ಲಿ ಸೋಲ್ಡ್ ಔಟ್

ಗುರುವಾರ, 26 ಮೇ 2016 (19:44 IST)
2016 ರ ಐಪಿಎಲ್ ಫೈನಲ್ ಪಂದ್ಯದ ವೀಕ್ಷಣೆಗೆ ಟಿಕೆಟ್‌ಗಳು ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆಗಿವೆ. 
 
ಕೆಎಸ್‌ಸಿಎ ಮೂಲಗಳನ್ನು ಉಲ್ಲೇಖಿಸಿ, ಕೇವಲ 2 ಗಂಟೆಗಳ ಅವಧಿಯಲ್ಲಿ ಟಿಕೆಟ್ ಮಾರಾಟವಾಗಿದ್ದು, ಅನೇಕ ಮಂದಿ ನಿರಾಶೆಯಿಂದ ಹಿಂತಿರುಗಿದರು ಎಂದು ವರದಿ ತಿಳಿಸಿವೆ. 
 
750 ರೂ. ನಿಂದ ಹಿಡಿದು 25,000 ರೂ.ವರೆಗೆ ಆನ್‌ಲೈನ್ ಟಿಕೆಟ್ ಮಾರಾಟ ಮೇ 13ರಿಂದ ಆರಂಭವಾಗಿದ್ದು, ಅದು ಕೂಡ ಮಾರಾಟವಾಗಿದೆ.

ಫೈನಲ್ ಪಂದ್ಯವನ್ನು ಬೆಂಗಳೂರಿನ ಐತಿಹಾಸಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ಆಡಲಾಗುತ್ತಿದ್ದು, ಹೋಮ್ ಟೀಂ ರಾಯಲ್ ಚಾಲೆಂಜರ್ಸ್ ಫೈನಲ್ ತಲುಪಿರುವುದರಿಂದ ಸೋಲ್ಡ್ ಔಟ್ ಆಗಿರುವುದರಲ್ಲಿ ಆಶ್ಚರ್ಯವಿಲ್ಲ ಎಂದರು. ಆರ್‌ಸಿಬಿ ನಾಳೆ ಗುಜರಾತ್ ಲಯನ್ಸ್ ಮತ್ತು ಸನ್ ರೈಸರ್ಸ್ ನಡುವೆ ಕ್ವಾಲಿಫೈಯರ್ 2ರಲ್ಲಿ ವಿಜೇತರ ಜತೆ ಫೈನಲ್ಸ್ ಆಡಲಿದೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ