ಐಪಿಎಲ್ 2016: ಸುರೇಶ್ ರೈನಾ ಗುಜರಾತ್ ಲಯನ್ಸ್ ನಾಯಕ

ಮಂಗಳವಾರ, 2 ಫೆಬ್ರವರಿ 2016 (19:22 IST)
ಭಾರತದ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರು ರಾಜಕೋಟ್ ತಂಡವಾದ ಗುಜರಾತ್ ಲಯನ್ಸ್‌ಗೆ ನಾಯಕರಾಗಲಿದ್ದಾರೆ.  ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಬ್ರಾಡ್ ಹಾಡ್ಜ್ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.  ರಾಜಕೋಟ್ ತಂಡವು ಐಪಿಎಲ್‌ನಲ್ಲಿ ಈ ವರ್ಷ ತನ್ನ ಚೊಚ್ಚಲ ಪ್ರವೇಶ ಮಾಡಿದೆ. 
 
ಸೀಮಿತ ಓವರುಗಳ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ ರೈನಾ ಸ್ಥಳೀಯ ಫೇವರಿಟ್ ರವೀಂದ್ರ ಜಡೇಜಾ ಅವರನ್ನು ಹಿಂದಿಕ್ಕಿ ನಾಯಕರಾಗಿದ್ದಾರೆ.  ಸಿಡ್ನಿ ಟ್ವೆಂಟಿ 20ಯಲ್ಲಿ ಅಚ್ಚರಿಯ ಫಾರಂನಲ್ಲಿ ರೈನಾ ಇದ್ದರು. 
 
 ಇದು ಹಾಡ್ಜ್ ಅವರು ಕೋಚ್ ಆಗಿ ಪೂರ್ಣ ಕಾಲೀನ ನೇಮಕ. ಹಾಡ್ಡ್ ಐಪಿಎಲ್ ಹಿರಿಯ ಆಟಗಾರನಾಗಿದ್ದು, ಕೊಲ್ಕತ್ತಾ ನೈಟ್ ರೈಡರ್ಸ್, ಕೊಚ್ಚಿ ಟಸ್ಕರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ರೈನಾ ಮತ್ತು ಜಡೇಜಾ ಇಬ್ಬರೂ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. 
 
 

ವೆಬ್ದುನಿಯಾವನ್ನು ಓದಿ