ಐಪಿಎಲ್ ನಲ್ಲಿ ಈ ಬಾರಿ ಗ್ರೂಪ್ ಸ್ಟೇಜ್: ಆರ್ ಸಿಬಿ ಯಾವ ಗುಂಪಿನಲ್ಲಿ?

ಶನಿವಾರ, 26 ಮಾರ್ಚ್ 2022 (08:50 IST)
ಮುಂಬೈ: ಐಪಿಎಲ್ 2022 ರ ನಿಯಮಗಳಲ್ಲಿ ಕೆಲವು ಬದಲಾವಣೆಗಳಾಗಿವೆ. ಇದುವರೆಗೆ ಲೀಗ್ ಮಾದರಿಯಲ್ಲಿ ಪಂದ್ಯಗಳು ನಡೆಯುತ್ತಿತ್ತು. ಇನ್ನೀಗ ಗ್ರೂಪ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಅದರಂತೆ 10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.

ಗುಂಪು ಎ ಮತ್ತು ಗುಂಪು ಬಿ ಆಗಿ ವಿಂಗಡಣೆ ಮಾಡಲಾಗಿದೆ. ಎರಡೂ ಗುಂಪುಗಳಲ್ಲಿ ತಲಾ ಐದು ತಂಡಗಳಿದ್ದು, ಗ್ರೂಪ್ ಹಂತದಲ್ಲಿ ಆರಂಭದ ಪಂದ್ಯಗಳು ನಡೆಯಲಿವೆ. ಲೀಗ್ ಹಂತದಲ್ಲಿ ಪ್ರತೀ ತಂಡ ತನ್ನ ಗುಂಪಿನಲ್ಲಿರುವ ಪ್ರತೀ ತಂಡದ ಜೊತೆಗೆ ತಲಾ ಎರಡು ಪಂದ್ಯವಾಡಬೇಕು.

ಅತೀ ಹೆಚ್ಚು ಪ್ರಶಸ್ತಿ ಗೆದ್ದಿರುವ ಮುಂಬೈ ಟೀಮ್ 1 ಆಗಿ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಚೆನ್ನೈ ತಂಡ ಟೀಮ್ ಎ ಆಗಿ ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಗ್ರೂಪ್ ಹಂತದಲ್ಲಿ 14 ಪಂದ್ಯಗಳಾಡಲಿರುವ ತಂಡಗಳು ಗರಿಷ್ಠ ಗೆಲುವಿನ ಆಧಾರದಲ್ಲಿ ಮುಂದಿನ ಹಂತಕ್ಕೆ ತೇರ್ಗಡೆಯಾಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ