ಧೋನಿ, ಕೊಹ್ಲಿ ನಾಯಕರಲ್ಲದ ಐಪಿಎಲ್: ಫ್ಯಾನ್ಸ್ ಬೇಸರ

ಶುಕ್ರವಾರ, 25 ಮಾರ್ಚ್ 2022 (10:35 IST)
ಮುಂಬೈ: ಈ ಬಾರಿಯ ಐಪಿಎಲ್ ಅಭಿಮಾನಿಗಳ ಪಾಲಿಗೆ ಎಂದಿನಂತಲ್ಲ. ವಿರಾಟ್ ಕೊಹ್ಲಿ ನಾಯಕರಾಗಿರದೇ ಕೇವಲ ಆಟಗಾರನಾಗಿ ಆಡುವ ಐಪಿಎಲ್ ಎಂಬ ಬೇಸರದಲ್ಲಿದ್ದ ಅಭಿಮಾನಿಗಳಿಗೆ ಕೂಲ್ ಕ್ಯಾಪ್ಟನ್ ಧೋನಿ ಕೂಡಾ ಶಾಕ್ ಕೊಟ್ಟಿದ್ದಾರೆ.

ಹೀಗಾಗಿ ಈ ಐಪಿಎಲ್ ಭಾರತ ಕ್ರಿಕೆಟ್ ತಂಡದ ಇಬ್ಬರು ದಿಗ್ಗಜರಾದ ಧೋನಿ ಮತ್ತು ಕೊಹ್ಲಿ ನಾಯಕರಾಗಿರದ ಐಪಿಎಲ್ ಎಂಬ ಬೇಸರ ಅಭಿಮಾನಿಗಳಲ್ಲಿದೆ.

ಅದರಲ್ಲೂ ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತಂದಿದೆ. ಧೋನಿ ನಾಯಕರಲ್ಲದ ಮೇಲೆ ಈ ಐಪಿಎಲ್ ಎಂದಿನಂತಿರಲು ಸಾಧ‍್ಯವೇ ಇಲ್ಲ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ