ಐಪಿಎಲ್ ಹರಾಜಿಗೊಳಗಾಗಲಿರುವ ಕಿರಿಯ ಮತ್ತು ಹಿರಿಯ ಕ್ರಿಕೆಟಿಗರು

ಬುಧವಾರ, 21 ಡಿಸೆಂಬರ್ 2022 (08:40 IST)
Photo Courtesy: Twitter
ಮುಂಬೈ: ಐಪಿಎಲ್ 2023 ರ ಹರಾಜು ಪ್ರಕ್ರಿಯೆಗೆ ಇನ್ನೇನು ಎರಡೇ ದಿನ ಬಾಕಿಯಿದೆ. ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಈ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗುವ ಆಟಗಾರರ ಪಟ್ಟಿಯನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ. ಆ ಪೈಕಿ 15 ವರ್ಷದ ಅಲ್ಲಾ ಮೊಹಮ್ಮದ್ ಶಾರ್ಟ್ ಲಿಸ್ಟ್ ಆಗಿರುವ ಕಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಇನ್ನು 40 ವರ್ಷದ ಸ್ಪಿನ್ನರ್ ಅಮಿತ್ ಮಿಶ್ರಾ ಶಾರ್ಟ್ ಲಿಸ್ಟ್ ಆಗಿರುವ ಹಿರಿಯ ಆಟಗಾರ ಎಂಬ ಖ್ಯಾತಿಗೊಳಗಾಗಿದ್ದಾರೆ. ಟೀಂ ಇಂಡಿಯಾ ಪರ ಆಡಿದ ಅನುಭವವಿರುವ ಅಮಿತ್ ಮಿಶ್ರಾ ಡೆಲ್ಲಿ ತಂಡದ ಪರ ಐಪಿಎಲ್ ಆಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ