ಕೊಲಂಬೊ: ವನಿತೆಯರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನಾಳೆ ಭಾರತ ಮತ್ತು ಪಾಕಿಸ್ತಾನ ಹೈ ವೋಲ್ಟ್ ಕದನ ನಡೆಯಲಿದೆ. ಈ ಪಂದ್ಯಕ್ಕೆ ಮುನ್ನ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ತಮ್ಮ ದೇಶದ ಆಟಗಾರ್ತಿಯರಿಗೆ ಭಾರತವನ್ನು ಹೊಸಕಿ ಹಾಕಿ ಎಂದು ಆರ್ಡರ್ ಕೊಟ್ಟಿದ್ದಾರೆ.
ಇತ್ತೀಚೆಗೆ ನಡೆದ ಏಷ್ಯಾ ಕಪ್ ಟೂರ್ನಿಯಲ್ಲಿ ಪುರುಷರ ತಂಡ ಭಾರತದ ಎದುರು ಸಂಪೂರ್ಣ ಮಂಡಿಯೂರಿತ್ತು. ಫೈನಲ್ ನಲ್ಲಿ ಭಾರತದ ವಿರುದ್ಧ ಸೋತಿದ್ದು ಮೊಹ್ಸಿನ್ ನಖ್ವಿಗೆ ಸಹಿಸಲಾಗುತ್ತಿಲ್ಲ. ಅದರಲ್ಲೂ ತಮ್ಮಿಂದ ಭಾರತೀಯ ಆಟಗಾರರು ಏಷ್ಯಾ ಕಪ್ ಟ್ರೋಫಿ ಸ್ವೀಕರಿಸದೇ ಇರುವುದು ಅವರಿಗೆ ಅವಮಾನವಾದಂತಾಗಿದೆ.
ಈ ಕಾರಣಕ್ಕೆ ಈಗ ಮಹಿಳೆಯರ ತಂಡಕ್ಕೆ ಆಲ್ ರೌಂಡರ್ ಪ್ರದರ್ಶನ ನೀಡಿ ಭಾರತವನ್ನು ಸೋಲಿಸಿ ಎಂದು ಕರೆಕೊಟ್ಟಿದ್ದಾರೆ. ಆದರೆ ಭಾರತದ ಮಹಿಳೆಯರ ತಂಡವನ್ನೂ ಸೋಲಿಸುವುದು ಮೊಹ್ಸಿನ್ ಹೇಳಿದಷ್ಟು ಸುಲಭವಲ್ಲ.
ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದ ಮಹಿಳೆಯರ ಕ್ರಿಕೆಟ್ ತಂಡ ಸ್ಟ್ರಾಂಗ್ ಟೀಂ. ಸ್ಮೃತಿ ಮಂಧನಾ, ಹರ್ಮನ್ ಪ್ರೀತ್ ರಂತಹ ದಿಗ್ಗಜ ಆಟಗಾರ್ತಿಯರ ಮುಂದೆ ಪಾಕಿಸ್ತಾನ ಗೆಲ್ಲುವುದು ಮೊಹ್ಸಿನ್ ಹೇಳಿದಷ್ಟು ಸುಲಭವಲ್ಲ. ಏಷ್ಯಾ ಕಪ್ ಹೈಡ್ರಾಮಾದ ಬಳಿಕ ಇಂದು ಮಹಿಳೆಯರ ತಂಡ ಮುಖಾಮುಖಿಯಾಗುತ್ತಿದ್ದು ಈ ಪಂದ್ಯವನ್ನು ಎಲ್ಲರೂ ಕುತೂಹಲದಿಂದ ನೋಡುವಂತಾಗಿದೆ. ಕೊಲೊಂಬೋದಲ್ಲಿ ಭಾರತೀಯ ಕಾಲಮಾನ ಪ್ರಕಾರ ನಾಳೆ ಅಪರಾಹ್ನ 3 ಗಂಟೆಗೆ ಪಂದ್ಯ ನಡೆಯಲಿದೆ.