ಐಪಿಎಲ್ 2023: ಚೆನ್ನೈ ಸೂಪರ್ ಕಿಂಗ್ಸ್-ರಾಜಸ್ಥಾನ್ ನಡುವೆ ಇಂದಿನ ಪಂದ್ಯ
ಕಳೆದ ಪಂದ್ಯದಲ್ಲಿ ರಾಜಸ್ಥಾನ್ ತಂಡವನ್ನು ಚೆನ್ನೈ ಸೋಲಿಸಿತ್ತು. ಸದ್ಯಕ್ಕೆ 7 ಪಂದ್ಯಗಳಿಂದ 5 ಗೆಲುವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಧೋನಿ ಪಡೆ ಈ ಕೂಟದ ಪ್ರಬಲ ತಂಡವೆನಿಸಿಕೊಂಡಿದೆ. ಹ್ಯಾಟ್ರಿಕ್ ಗೆಲುವು ಕಂಡು ಉತ್ಸಾಹದಲ್ಲಿರುವ ಸಿಎಸ್ ಕೆ ಸೋಲಿಸುವುದು ಅಷ್ಟು ಸುಲಭವಲ್ಲ.
ಆದರೆ ರಾಜಸ್ಥಾನ್ ಕಳೆದ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಸೋಲು ಕಂಡಿದೆ. 7 ಪಂದ್ಯಗಳಿಂದ 4 ಗೆಲುವು ಕಂಡಿರುವ ಸಂಜು ಸ್ಯಾಮ್ಸನ್ ಪಡೆ ತಾನೇನೂ ಕಮ್ಮಿಯಿಲ್ಲ ಎಂದು ಈಗಾಗಲೇ ಸಾಬೀತುಪಡಿಸಿದೆ. ಜೊತೆಗೆ ತವರಿನ ಬಲವೂ ಇರುವುದರಿಂದ ಗೆಲ್ಲುವ ವಿಶ್ವಾಸದಲ್ಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.