ಐಪಿಎಲ್ 2023: ಕೆಕೆಆರ್ ಎದುರಿಸಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು
ಆರ್ ಸಿಬಿ ಕಳೆದ ಎರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಣಕ್ಕಿಳಿದು ಎರಡೂ ಪಂದ್ಯಗಳನ್ನು ಗೆದ್ದುಕೊಂಡಿತ್ತು. ಕಳೆದ ಐದು ಪಂದ್ಯಗಳಿಂದ ಆರ್ ಸಿಬಿ ಎರಡು ಗೆಲುವು ಕಂಡಿದೆ. ಆದರೆ ಗ್ಲೆನ್ ಮ್ಯಾಕ್ಸ್ ವೆಲ್, ಫಾ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಮಾತ್ರ ಎಲ್ಲಾ ಪಂದ್ಯಗಳಲ್ಲಿ ಆಡಿದ್ದಾರೆ. ಉಳಿದವರಿಂದಲೂ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಬರಬೇಕಿದೆ.
ಇನ್ನು, ಕೆಕೆಆರ್ ಗೆ ಆರಂಭದಲ್ಲಿ ಸಿಕ್ಕ ಯಶಸ್ಸು ಈಗ ಇಲ್ಲ. ಮೊದಲ ಪಂದ್ಯದಲ್ಲಿ ಮಾತ್ರ ಗೆಲುವು ಕಂಡಿತ್ತು. ಇದಾದ ಬಳಿಕ ನಾಲ್ಕು ಸೋಲು ಕೆಕೆಆರ್ ನ್ನು ಕಂಗೆಡಿಸಿದೆ. ಹೀಗಾಗಿ ಸೋಲಿನ ಸರಪಳಿಯಿಂದ ಮೇಲೆ ಬರಬೇಕಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.