ಐಪಿಎಲ್ 2023: ‘ಆಕಾಶ್’ ವಿಕೆಟ್ ಸುರಿಮಳೆಗೆ ಸೋತ ಲಕ್ನೋ

ಗುರುವಾರ, 25 ಮೇ 2023 (08:10 IST)
ಚೆನ್ನೈ: ಐಪಿಎಲ್ 2023 ರ ಎಲಿಮಿನೇಟರ್ ಪಂದ್ಯವನ್ನು ಮುಂಬೈ ಇಂಡಿಯನ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 81 ರನ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡು ಕ್ವಾಲಿಫೈಯರ್ ಹಂತಕ್ಕೆ ಅರ್ಹತೆ ಪಡೆದಿದೆ.

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಮತ್ತೆ ಮಿಂಚಿದ ಕ್ಯಾಮರೂನ್ ಗ್ರೀನ್ 41, ಸೂರ್ಯಕುಮಾರ್ ಯಾದವ್ 33, ತಿಲಕ್ ವರ್ಮ 26, ನೇಹಲ್ ವಧೇರಾ 23 ರನ್ ಗಳಿಸಿದರು.

ಈ ಮೊತ್ತ ಬೆನ್ನತ್ತಿದ ಲಕ್ನೋಗೆ ಆಕಾಶ್ ಮಧ್ವಾಲ್ ಸಿಂಹ ಸ್ವಪ್ನರಾದರು. ಕಳೆದ ಕೆಲವು ಪಂದ್ಯಗಳಿಂದ ಮುಂಬೈ ಬೌಲಿಂಗ್ ಬೆನ್ನುಲುಬಾಗಿರುವ ಆಕಾಶ್ ಮಧ್ವಾಲ್ ಈ ಪಂದ್ಯದಲ್ಲಿ 3.3 ಓವರ್ ಬೌಲಿಂಗ್ ನಡೆಸಿ 5 ವಿಕೆಟ್ ಗಳ ಗೊಂಚಲು ಪಡೆದರು. ಕಳೆದ ಪಂದ್ಯದಲ್ಲಿ ಅವರು 4 ವಿಕೆಟ್ ಪಡೆದಿದ್ದರು. ಲಕ್ನೋ ಪರ ನಾಯಕ ಕೃನಾಲ್ ಪಾಂಡ್ಯ 40, ಕೈಲ್ ಮೇಯರ್ಸ್ 18 ರನ್, ದೀಪಕ್ ಹೂಡಾ 15 ರನ್ ಗಳಿಸಿದ್ದು ಬಿಟ್ಟರೆ ಉಳಿದೆಲ್ಲಾ ಬ್ಯಾಟಿಗರದ್ದು ಏಕಂಕಿ ಕೊಡುಗೆ. ಅಂತಿಮವಾಗಿ ಲಕ್ನೋ 16.3 ಓವರ್ ಗಳಲ್ಲಿ 101 ರನ್ ಗಳಿಗೆ ಆಲೌಟ್ ಆಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ