ಐಪಿಎಲ್ 2023: ಮುಂಬೈ-ಲಕ್ನೋ ನಡುವೆ ಇಂದು ಎಲಿಮಿನೇಟರ್

ಬುಧವಾರ, 24 ಮೇ 2023 (08:20 IST)
ಚೆನ್ನೈ: ಐಪಿಎಲ್ 2023 ರಲ್ಲಿ ಇಂದು ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಮುಂಬೈ, ಲಕ್ನೋ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ಲಕ್ನೋ ಸೂಪರ್ ಜೈಂಟ್ಸ್ ಟೂರ್ನಿಯಲ್ಲಿ ಖಾಯಂ ನಾಯಕ ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಲೇ ಬಂದಿದೆ. ನಿಕಲಸ್ ಪೂರನ್, ಕೃನಾಲ್ ಪಾಂಡ್ಯ ಲಕ್ನೋ ಶಕ್ತಿ.

ಇತ್ತ ಮುಂಬೈ ಇಂಡಿಯನ್ಸ್ ಅನನುಭವಿ ಬೌಲರ್ ಗಳನ್ನು ಕಟ್ಟಿಕೊಂಡು ಅದ್ಭುತ ಪ್ರದರ್ಶನ ನೀಡುತ್ತಲೇ ಬಂದಿದೆ. ಅದರಲ್ಲೂ ಯುವ ವೇಗಿ ಆಕಾಶ್ ಗಮನ ಸೆಳೆಯುತ್ತಿದ್ದಾರೆ. ಕ್ಯಾಪ್ಟನ್ ರೋಹಿತ್ ಶರ್ಮಾ, ಕ್ಯಾಮರೂನ್ ಗ್ರೀನ್ ತಂಡದ ಬ್ಯಾಟಿಂಗ್ ಶಕ್ತಿಗಳು. ಈ ಪಂದ್ಯ ಸಂಜೆ 7.30 ಕ್ಕೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ