ಐಪಿಎಲ್ 2023 ರಲ್ಲಿ ಹೊಸ ನಿಯಾಮವಳಿ ಹೀಗಿರಲಿದೆ

ಶುಕ್ರವಾರ, 24 ಮಾರ್ಚ್ 2023 (08:30 IST)
Photo Courtesy: Twitter
ಮುಂಬೈ: ಮಾರ್ಚ್ 31 ರಿಂದ ಐಪಿಎಲ್ ಆರಂಭವಾಗಲಿದ್ದು, ಈ ಆವೃತ್ತಿಯಲ್ಲಿ ಕೆಲವು ಹೊಸ ನಿಯಮಾವಳಿಗಳನ್ನು ಹೊರತರಲಾಗಿದೆ.

ಇದುವರೆಗೆ ಟಾಸ್ ಗೂ ಮೊದಲೇ ಉಭಯ ನಾಯಕರು ತಮ್ಮ ಆಡುವ ಬಳಗವನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಆದರೆ ಇನ್ನು ಎರಡು ತಂಡದ ಪಟ್ಟಿಯನ್ನು ತರಲಿರುವ ನಾಯಕರು ಟಾಸ್ ಬಳಿಕವೇ ಆಡುವ ಬಳಗದ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಕಳೆದ ಐಪಿಎಲ್ ನಲ್ಲಿ ಟಾಸ್ ಗೆದ್ದವರೇ ಪಂದ್ಯ ಗೆಲ್ಲುತ್ತಾರೆ ಎಂಬ ಅಪವಾದ ಕೇಳಿಬಂದಿತ್ತು. ಹೀಗಾಗಿ ಟಾಸ್ ನಿಂದಲೇ ಪಂದ್ಯ ನಿರ್ಣಯವಾಗುವುದನ್ನು ತಪ್ಪಿಸಲು ಈ ಹೊಸ ನಿಯಮ ತರಲಾಗಿದೆ.

ಇನ್ನು, ನಿಗದಿತ ಸಮಯದೊಳಗೆ ಓವರ್ ಪೂರ್ತಿ ಮಾಡದೇ ಇದ್ದರೆ ನಾಲ್ವರು ಫೀಲ್ಡರ್ ಗಳಿಗೆ ಮಾತ್ರ 30 ಯಾರ್ಡ್ ಸರ್ಕಲ್ ಹೊರಗೆ ಫೀಲ್ಡಿಂಗ್ ಮಾಡಲು ಅವಕಾಶ ನೀಡಲಾಗುವುದು. ಫೀಲ್ಡರ್ ಅಥವಾ ವಿಕೆಟ್ ಕೀಪರ್ ದುರ್ವರ್ತನೆ ತೋರಿದರೆ ಎದುರಾಳಿ ತಂಡಕ್ಕೆ ಪೆನಾಲ್ಟಿ ರೂಪದಲ್ಲಿ 5 ರನ್ ಮತ್ತು ಆ ಎಸೆತವನ್ನು ಡೆಡ್ ಬಾಲ್ ಎಂದು ಘೋಷಿಸಲಾಗುವುದು. ಈ ಎರಡು ಹೊಸ ನಿಯಮಗಳು ಈ ಐಪಿಎಲ್ ನಿಂದ ಕಾರ್ಯರೂಪಕ್ಕೆ ಬರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ