ಐಪಿಎಲ್ 2023 ಗೆದ್ದವರಿಗೆ ಸಿಗುವ ಬಹುಮಾನ ಹಣವೆಷ್ಟು?

ಶುಕ್ರವಾರ, 31 ಮಾರ್ಚ್ 2023 (08:30 IST)
ಅಹಮ್ಮದಾಬಾದ್: ಮತ್ತೊಮ್ಮೆ ಐಪಿಎಲ್ ಆರಂಭವಾಗುತ್ತಿದೆ. 15 ನೇ ಸೀಸನ್ ಐಪಿಎಲ್ ಇಂದಿನಿಂದ ಆರಂಭವಾಗುತ್ತಿದೆ.

ಐಪಿಎಲ್ ಎಂದರೆ ಶ್ರೀಮಂತರ ಕ್ರೀಡೆ ಎಂದೇ ಫೇಮಸ್. ಇಲ್ಲಿ ಗೆದ್ದವರಿಗೆ ಕೋಟಿ ಕೋಟಿ ಹಣ ಬಹುಮಾನ ರೂಪದಲ್ಲಿ ಜೇಬಿಗಿಳಿಸಬಹುದು. ಆಟಗಾರರೂ ಕೋಟಿಗೇ ಬೆಲೆ ಬಾಳುತ್ತಾರೆ. ಹೀಗಾಗಿ ಇದು ಶ್ರೀಮಂತ ಕ್ರೀಡಾಕೂಟ ಎನ್ನಲಾಗುತ್ತದೆ.

ಐಪಿಎಲ್ 2023 ಗೆದ್ದ ತಂಡಕ್ಕೆ ಈ ಬಾರಿ 20 ಕೋಟಿ ರೂ. ಬಹುಮಾನ ಮೊತ್ತ ಸಿಗಲಿದೆ. ರನ್ನರ್ ಅಪ್ ಆದ ತಂಡ 13 ಕೋಟಿ ರೂ. ಜೇಬಿಗಿಳಿಸಲಿದೆ. ಇದಲ್ಲದೆ ಸ್ಪಾನ್ಸರ್ ಗಳು ಬಹುಮಾನ ರೂಪದಲ್ಲಿ ಕೊಡುವ ಹಣ ಬೇರೆಯೇ ಆಗಿರುತ್ತದೆ. ಹೀಗಾಗಿ ಇದು ಮಿಲಿಯನ್ ಡಾಲರ್ ಕ್ರೀಡಾಕೂಟವಾಗಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ