ಐಪಿಎಲ್ ನಲ್ಲಿ ಗರಿಷ್ಠ ಶತಕ ದಾಖಲಿಸುವ ಅವಕಾಶ ಕೊಹ್ಲಿಗೆ

ಗುರುವಾರ, 30 ಮಾರ್ಚ್ 2023 (09:10 IST)
ಮುಂಬೈ: ಐಪಿಎಲ್ 2023 ಕ್ಕೆ ಇನ್ನೇನು ಕೆಲವೇ ಕ್ಷಣ ಬಾಕಿಯಿದ್ದು, ಈ ಐಪಿಎಲ್ ನಲ್ಲಿ ಕೆಲವು ದಾಖಲೆಗಳಾಗುವ ನಿರೀಕ್ಷೆಯಿದೆ.

ಅದರಲ್ಲೂ ಟೀಂ ಇಂಡಿಯಾ ರನ್ ಮೆಷಿನ್, ಆರ್ ಸಿಬಿ ದಿಗ್ಗಜ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಮಾಡುವ ಅವಕಾಶ ಹೊಂದಿದ್ದಾರೆ. ಐಪಿಎಲ್ ನಲ್ಲಿ ಕೊಹ್ಲಿ ಇದುವರೆಗೆ ಐದು ಶತಕ ಸಿಡಿಸಿದ್ದಾರೆ.

ಐಪಿಎಲ್ ನಲ್ಲಿ ಗರಿಷ್ಠ ಶತಕ ಗಳಿಸಿರುವ ದಾಖಲೆ ಇರುವುದು ಕ್ರಿಸ್ ಗೇಲ್ ಹೆಸರಿನಲ್ಲಿ. ಗೇಲ್ ಇದುವರೆಗೆ 6 ಶತಕ ಸಿಡಿಸಿದ್ದಾರೆ. ಇದೀಗ ಕೊಹ್ಲಿ ಒಂದು ಶತಕ ಸಿಡಿಸಿದರೆ ಗೇಲ್ ದಾಖಲೆ ಸರಿಗಟ್ಟಲಿದ್ದಾರೆ. ಅತ್ತ ಜೋಸ್ ಬಟ್ಲರ್ ಕೂಡಾ ಐದು ಶತಕ ಸಿಡಿಸಿದ್ದಾರೆ. ಆದರೆ ಅವರು ಈ ಬಾರಿ ಐಪಿಎಲ್ ಆಡುವುದು ಅನುಮಾನವಾಗಿದೆ. ಹೀಗಾಗಿ ಕೊಹ್ಲಿ ಈ ಅವಕಾಶ ಹೆಚ್ಚಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ