ಐಪಿಎಲ್ 2024: ಮೊಹಮ್ಮದ್ ಶಮಿಗೆ ಬಂಪರ್ ಆಫರ್, ಗುಜರಾತ್ ಬಿಡ್ತಾರಾ ವಿಶ್ವಕಪ್ ಹೀರೋ?
ಈ ನಡುವೆ ಮೊಹಮ್ಮದ್ ಶಮಿಗಾಗಿ ಫ್ರಾಂಚೈಸಿಯೊಂದು ಭಾರೀ ಮಸಲತ್ತು ನಡೆಸಿದೆಯಂತೆ! ಮೊಹಮ್ಮದ್ ಶಮಿ ಸದ್ಯಕ್ಕೆ ಗುಜರಾತ್ ಟೈಟನ್ಸ್ ತಂಡದ ಭಾಗವಾಗಿದ್ದಾರೆ. ಅವರನ್ನು ಟೈಟನ್ಸ್ ತಂಡದಿಂದ ರಿಲೀಸ್ ಮಾಡಿಲ್ಲ.
ಹಾಗಿದ್ದರೂ ಟೀಂ ಇಂಡಿಯಾದ ವಿಶ್ವಕಪ್ ಹೀರೋ ಬೌಲರ್ ನ್ನು ಇನ್ನೊಂದು ಮಾರ್ಗದಲ್ಲಿ ತಮ್ಮ ತಂಡಕ್ಕೆ ಕರೆಸಿಕೊಳ್ಳಲು ಪ್ರಮುಖ ಫ್ರಾಂಚೈಸಿಯೊಂದು ಪ್ರಯತ್ನ ನಡೆಸಿದೆ. ಶಮಿಯನ್ನು ಹರಾಜು ಪ್ರಕ್ರಿಯೆ ಮೂಲಕ ಖರೀದಿಸಲು ಸಾಧ್ಯವಿಲ್ಲ.
ಆದರೆ ಟ್ರೇಡಿಂಗ್ ವಿಂಡೋ ಓಪನ್ ಇದ್ದು, ಟ್ರೇಡಿಂಗ್ ಮೂಲಕ ಆಟಗಾರರನ್ನು ವಿನಿಮಯ ಮಾಡಿಕೊಳ್ಳಬಹುದು. ಹೀಗಾಗಿ ಶಮಿಯನ್ನು ಟ್ರೇಡಿಂಗ್ ಮೂಲಕ ತಮ್ಮ ತಂಡಕ್ಕೆ ಭಾರೀ ಮೊತ್ತ ಕೊಟ್ಟು ಖರೀದಿಸಿಕೊಳ್ಳಲು ಫ್ರಾಂಚೈಸಿಯೊಂದು ಪ್ರಯತ್ನ ನಡೆಸಿದೆ ಎನ್ನಲಾಗಿದೆ. ಹೀಗಾಗಿ ಶಮಿ ಈ ಬಾರಿ ಗುಜರಾತ್ ತಂಡದಿಂದ ಹೊರಹೋದರೂ ಅಚ್ಚರಿಯಿಲ್ಲ.