IPL 2024: ಆರ್ ಸಿಬಿ ಖರೀದಿಸಬಹುದಾದ ಆ ಮೂವರು ಆಟಗಾರರು

ಗುರುವಾರ, 23 ನವೆಂಬರ್ 2023 (10:21 IST)
ಬೆಂಗಳೂರು: ಐಪಿಎಲ್ 2024 ಕ್ಕೆ ಆಟಗಾರರ ಆಯ್ಕೆ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಬಹುತೇಕ ಫ್ರಾಂಚೈಸಿಗಳು ಈ ಬಾರಿ ತಮ್ಮ ತಂಡದಿಂದ ರಿಲೀಸ್ ಮಾಡಲಿರುವ ಮತ್ತು ಖರೀದಿ ಮಾಡುವ ಆಟಗಾರರ ಪಟ್ಟಿ ತಯಾರಿಸಿದೆ.

ಆರ್ ಸಿಬಿಯೂ ಈ ಬಾರಿ ಕೆಲವೊಂದು ಆಟಗಾರರನ್ನು ರಿಲೀಸ್ ಮಾಡುವುದು ಖಚಿತವಾಗಿದೆ. ಅವರಲ್ಲಿ ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಹರ್ಷಲ್ ಪಟೇಲ್ ಮುಂತಾದವರ ಹೆಸರು ಮುಂಚೂಣಿಯಲ್ಲಿದೆ. ಸದ್ಯಕ್ಕೆ ಆರ್ ಸಿಬಿಗೆ ಓರ್ವ ಸೂಕ್ತ ವಿಕೆಟ್ ಕೀಪರ್, ಸ್ಪಿನ್ ಬೌಲರ್, ವೇಗಿಯ ಅಗತ್ಯವಿದೆ.

ಹೀಗಾಗಿ ಶಹಬಾಜ್ ಅಹಮ್ಮದ್ ಬದಲಿಗೆ ಗುಜರಾತ್ ತಂಡದ ಸಾಯಿ ಕಿಶೋರ್ ಅವರಿಗೆ ಗಾಳ ಹಾಕಬಹುದು. ಇವರಲ್ಲದೆ ವಿಕೆಟ್ ಕೀಪರ್ ಆಗಿ ಕೆ.ಎಸ್. ಭರತ್ ರನ್ನು ಖರೀದಿ ಮಾಡಲು ಆಸಕ್ತಿ ತೋರಬಹುದು. ಆರ್ ಸಿಬಿಗೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲ ಆಟಗಾರನ ಅಗತ್ಯವಿರುವುದರಿಂದ ಭರತ್ ಸೂಕ್ತರಾಗಬಹುದು. ಬೌಲಿಂಗ್ ವಿಭಾಗಕ್ಕೆ ಬಲ ತುಂಬಲು ಸದ್ಯಕ್ಕೆ ಮುಂಬೈ ಇಂಡಿಯನ್ಸ್ ನಲ್ಲಿರುವ ಶಿವಂ ಮಾವಿಯನ್ನು ಖರೀದಿಸಬಹುದು.

ನವಂಬರ್ 26 ರೊಳಗೆ ಎಲ್ಲಾ ಫ್ರಾಂಚೈಸಿಗಳೂ ತಮ್ಮ ಖರೀದಿ ಮಾಡುವ ಮತ್ತು ರಿಲೀಸ್ ಮಾಡುವ ಆಟಗಾರರ ಪಟ್ಟಿಯನ್ನು ರೆಡಿ ಮಾಡಿಕೊಳ್ಳಬೇಕು. ಈಗಾಗಲೇ ಎಲ್ಲಾ ಫ್ರಾಂಚೈಸಿಗಳೂ ಆ ಕೆಲಸದಲ್ಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ