ಐಪಿಎಲ್ 2024: ಲಕ್ನೋ ಕೈಬಿಟ್ಟು ಕೆಕೆಆರ್ ಗೆ ವಾಪಸ್ ಆದ ಗೌತಮ್ ಗಂಭೀರ್

ಬುಧವಾರ, 22 ನವೆಂಬರ್ 2023 (13:56 IST)
Photo Courtesy: Twitter
ಕೋಲ್ಕೊತ್ತಾ: ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಈಗ ಮರಳಿ ಕೆಕೆಆರ್ ಗೂಡು ಸೇರಿದ್ದಾರೆ.

ಗೌತಮ್ ಗಂಭೀರ್ ಈ ಮೊದಲು ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದರು. ತಂಡಕ್ಕೆ ಎರಡು ಬಾರಿ ಐಪಿಎಲ್ ಕಿರೀಟ ಗೆಲ್ಲಿಸಿಕೊಟ್ಟವರು. ಇದೀಗ ಲಕ್ನೋ ಬಿಟ್ಟು ಗಂಭೀರ್ ಮರಳಿ ಕೆಕೆಆರ್ ಗೆ ಮರಳಿದ್ದಾರೆ.

ಸ್ವತಃ ಕೆಕೆಆರ್ ‍ಫ್ರಾಂಚೈಸಿ ಸೋಷಿಯಲ್ ಮೀಡಿಯಾ ಮೂಲಕ ಈ ವಿಚಾರವನ್ನು ಖಚಿತಪಡಿಸಿದೆ. ಕಳೆದ ಎರಡು ಬಾರಿ ಲಕ್ನೋ ತಂಡದ ಮೆಂಟರ್ ಆಗಿದ್ದ ಗಂಭಿರ್ ಹಲವು ವಿವಾದಗಳನ್ನು ಮೈಮೇಲೆಳೆದುಕೊಂಡಿದ್ದರು. ಮೈದಾನದಲ್ಲಿ ಕೊಹ್ಲಿ ಜೊತೆಗಿನ ಸಂಘರ್ಷದ ಬಳಿಕ ಲಕ್ನೋ ಮಾಲಿಕರಿಗೆ ಗಂಭೀರ್ ಮೇಲೆ ಅಸಮಾಧಾನವಿತ್ತು ಎನ್ನಲಾಗಿತ್ತು.

ಇದೀಗ ತಮ್ಮ ಮೂಲ ತಂಡಕ್ಕೇ ಮೆಂಟರ್ ಆಗಿ ಗಂಭೀರ್ ಮರಳಿದ್ದಾರೆ. ಗಂಭೀರ್ ಜೊತೆಗೆ ಕೆಕೆಆರ್ ತಂಡದ ಕೋಚ್ ಆಗಿ ಚಂದ್ರಕಾಂತ್ ಪಂಡಿತ್ ಕಾರ್ಯನಿರ್ವಹಿಸಲಿದ್ದಾರೆ. ಗಂಭೀರ್ ರನ್ನು ಕೆಕೆಆರ್ ಮಾಲಿಕ ಶಾರುಖ್ ಖಾನ್ ಸ್ವಾಗತಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ