ನಾಳೆ ಐಸಿಸಿ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಟೂರ್ನಿಯೂ ಮುಗಿಯುತ್ತಿದ್ದ ಹಾಗೇ ಭಾರತದ ಕ್ರಿಕೆಟ್ ತಂಡದ ಆಟಗಾರರು ಇದೇ ತಿಂಗಳು ಆರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್‌ನತ್ತ ಮುಖಮಾಡಲಿದ್ದಾರೆ.
18ನೇ ಆವೃತ್ತಿಯ 2025 ರ ಐಪಿಎಲ್ ಮಾರ್ಚ್ 21 ರಂದು ಉದ್ಘಾಟನೆಗೊಳ್ಳಲಿದ್ದು, 22ರಂದು ಹಾಲಿ ಚಾ'ಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ಮ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಪಂದ್ಯಾಟದಲ್ಲಿ ಮುಖಾಮುಖಿಯಾಗಲಿದೆ. ಇನ್ನೂ ಫೈನಲ್ ಪಂದ್ಯವು ಮೇ 25, 2025 ರಂದು ನಿಗದಿಯಾಗಿದೆ. ಈ ಋತುವಿನಲ್ಲಿ ಎರಡು ತಿಂಗಳುಗಳಲ್ಲಿ 74 ಪಂದ್ಯಗಳಲ್ಲಿ ಹತ್ತು ತಂಡಗಳು ಟ್ರೋಫಿಗಾಗಿ ಸೆಣೆಸಾಡಲಿದೆ.
ಐಪಿಎಲ್ 2025 ಸೀಸನ್ ಮೊದಲ ಪಂದ್ಯಾಟ ಮಾರ್ಚ್ 22 ರ ಶನಿವಾರದಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್ ಹಾಗೂ ಆರ್‌ಸಿಬಿ ನಡುವೆ ನಡೆಯಲಿದೆ
ಐಪಿಎಲ್ 2025 ಮಾರ್ಚ್ 21, 2025 ರಂದು ಪ್ರಾರಂಭವಾಗಲಿದ್ದು, ಮೇ 25, 2025 ರವರೆಗೆ ನಡೆಯಲಿದ್ದು, ಆ ಎರಡು ತಿಂಗಳುಗಳಲ್ಲಿ ಒಟ್ಟು 74 ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ.
ಆರಂಭ ದಿನಾಂಕ: ಮಾರ್ಚ್ 21, 2025
ಮೊದಲ ಪಂದ್ಯಾಟ: ಮಾರ್ಚ್ 22, 2025
ಅಂತಿಮ ದಿನಾಂಕ: ಮೇ 25, 2025
ಒಟ್ಟು ತಂಡಗಳು: 10
ಒಟ್ಟು ಪಂದ್ಯಗಳು: 74