ಗೆಲುವಿನ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ ಜೊತೆ ವಿರಾಟ್ ಕೊಹ್ಲಿ ಶಾಕಿಂಗ್ ವರ್ತನೆ: ವಿಡಿಯೋ
ಕೆಎಲ್ ರಾಹುಲ್ ಸಿಕ್ಸರ್ ಸಿಡಿಸಿ ಪಂದ್ಯ ಗೆಲ್ಲಿಸುತ್ತಿದ್ದಂತೇ ಡ್ರೆಸ್ಸಿಂಗ್ ರೂಂನಲ್ಲಿದ್ದ ಎಲ್ಲಾ ಆಟಗಾರರೂ ಕುಣಿದು ಕುಪ್ಪಳಿಸಿದ್ದರು. ಕೊಹ್ಲಿ ಎಲ್ಲರಿಗಿಂತ ಮೊದಲು ಮೈದಾನಕ್ಕೆ ಓಡಿ ಬಂದಿದ್ದರು.
ಅಲ್ಲಿಯೇ ಎಲ್ಲಾ ಆಟಗಾರರನ್ನು ಅಪ್ಪಿ ಮುದ್ದಾಡಿದ ಕೊಹ್ಲಿ ಬಳಿಕ ಗ್ಯಾಲರಿಯಲ್ಲಿ ಕೂತಿದ್ದ ಅನುಷ್ಕಾ ಕಡೆಗೂ ನಾವು ಗೆದ್ದೆವು ಎಂದು ಸನ್ನೆ ಮಾಡಿ ಸಂಭ್ರಮಿಸಿದ್ದಾರೆ. ಈ ವೇಳೆ ಮೈದಾನದಲ್ಲಿದ್ದ ಆಸ್ಟ್ರೇಲಿಯಾ ಆಟಗಾರರು ಪೆವಿಲಿಯನ್ ಕಡೆಗೆ ಬರುತ್ತಿದ್ದರು.
ಶಿಷ್ಟಾಚಾರ ಪ್ರಕಾರ ಅವರಿಗೆ ಕೈಕುಲುಕಬೇಕಿತ್ತು. ಈ ವೇಳೆ ಮುಂದಿದ್ದ ಕೊಹ್ಲಿ ಹಿಂದೆ ಸರಿದು ತಮಗಿಂತ ಹಿಂದಿದ್ದ ನಾಯಕ ರೋಹಿತ್ ಶರ್ಮಾರನ್ನು ಮುಂದೆ ತಳ್ಳಿ ನೀನೇ ಮುಂದೆ ಹೋಗು ಕಳುಹಿಸಿ ಅವರ ಹಿಂದೆ ತಾವು ತೆರಳಿದ್ದಾರೆ. ಕೊಹ್ಲಿಯ ಈ ವರ್ತನೆ ಅಭಿಮಾನಿಗಳ ಮನಗೆದ್ದಿದೆ. ಈ ಪಂದ್ಯ ಗೆಲ್ಲಲು ಕಾರಣವಾಗಿದ್ದು ಕೊಹ್ಲಿಯ ಇನಿಂಗ್ಸ್. ಹಾಗಿದ್ದರೂ ನಾಯಕನಿಗೆ ಸಿಗಬೇಕಾದ ಗೌರವವನ್ನು ಕೊಡುವ ಮೂಲಕ ಕೊಹ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.