ಮುಂಬೈ: ಐಪಿಎಲ್ 2025 ಆರಂಭಕ್ಕೆ ಕೆಲವೇ ನಿಮಿಷಗಳ ಮೊದಲು ಮುಂಬೈ ಇಂಡಿಯನ್ಸ್ ತಂಡ ತನ್ನ ಹೊಸ ನಾಯಕನ ಘೋಷಣೆ ಮಾಡಿದೆ. ಸೂರ್ಯಕುಮಾರ್ ಮುಂಬೈ ತಂಡದ ನಾಯಕರಾಗಲಿದ್ದಾರೆ. ಈ ದಿಡೀರ್ ಬದಲಾವಣೆಗೆ ಕಾರಣವೇನು ನೋಡಿ.
ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾ ಟಿ20 ತಂಡದ ನಾಯಕರಾಗಿ ಸಾಕಷ್ಟು ಯಶಸ್ಸು ಗಳಿಸಿದ್ದಾರೆ. ಇದೀಗ ಅವರನ್ನು ಏಕಾಏಕಿ ಮುಂಬೈ ಫ್ರಾಂಚೈಸಿ ನಾಯಕ ಎಂದು ಘೋಷಣೆ ಮಾಡಿದೆ. ಆದರೆ ಇಲ್ಲೇ ಇರುವುದು ಟ್ವಿಸ್ಟ್.
ಸೂರ್ಯ ಮೊದಲ ಪಂದ್ಯಕ್ಕೆ ಮಾತ್ರ ನಾಯಕರಾಗಲಿದ್ದಾರೆ. ಖಾಯಂ ನಾಯಕ ಹಾರ್ದಿಕ್ ಪಾಂಡ್ಯಗೆ ನಿಧಾನಗತಿಯ ಓವರ್ ಕಾರಣಕ್ಕೆ ಒಂದು ಪಂದ್ಯದ ನಿಷೇಧ ಶಿಕ್ಷೆಯಿದೆ. ಈ ಕಾರಣಕ್ಕೆ ಸಿಎಸ್ ಕೆ ವಿರುದ್ಧದ ಮೊದಲ ಪಂದ್ಯಕ್ಕೆ ಸೂರ್ಯಕುಮಾರ್ ನಾಯಕರಾಗಲಿದ್ದಾರೆ.
ಮುಂಬೈ ಇಂತಹದ್ದೊಂದು ಪ್ರಕಟಣೆ ನೀಡುತ್ತಿದ್ದಂತೇ ಕೇವಲ ಒಂದು ಪಂದ್ಯ ಯಾಕೆ, ಇಡೀ ಸೀಸನ್ ಗೇ ಸೂರ್ಯಕುಮಾರ್ ರನ್ನು ನಾಯಕರಾಗಿ ನೇಮಿಸಿ. ಹೇಗಿದ್ದರೂ ಅವರು ಟೀಂ ಇಂಡಿಯಾ ನಾಯಕರಾಗಿ ಯಶಸ್ವಿಯಾಗಿದ್ದಾರೆ. ಮುಂಬೈ ತಂಡಕ್ಕೂ ಅವರೇ ಖಾಯಂ ನಾಯಕರಾಗಲಿ ಎಂದು ಆಗ್ರಹಿಸಿದ್ದಾರೆ.