IPL 2026: ಒಂದೇ ಓವರ್ ನಲ್ಲಿ 11 ಬಾರಿ ಚೆಂಡೆಸೆದ ಅರ್ಷ್ ದೀಪ್ ಸಿಂಗ್
ಪಂಜಾಬ್ ಕಿಂಗ್ಸ್ ಬೌಲರ್ ಅರ್ಷ್ ದೀಪ್ ಸಿಂಗ್ ಟಿ20 ಮಾದರಿಯ ಬೆಸ್ಟ್ ಬೌಲರ್. ಆದರೆ ಅವರು ಲೀಗಲ್ ಡೆಲಿವರಿ ಮಾಡುವುದಕ್ಕಿಂತ ಇತರೆ ರನ್ ಕೊಡುವುದರಲ್ಲೇ ಫೇಮಸ್. ಅದರಲ್ಲೂ ವಿಶೇಷವಾಗಿ ಪದೇ ಪದೇ ವೈಡ್ ಎಸೆಯುವ ಚಾಳಿಯಿದೆ.
ನಿನ್ನೆಯ ಪಂದ್ಯದಲ್ಲಿ ಕೊನೆಯ ಓವರ್ ಎಸೆಯಲು ಬಂದ ಅವರು ಒಟ್ಟು 11 ಬಾರಿ ಚೆಂಡು ಎಸೆಯುವಂತಾಗಿದೆ. ಯಾಕೆಂದರೆ ಮೊದಲ ಎಸೆತವೇ ವೈಡ್ ಆಗಿತ್ತು. ಅದಾದ ಬಳಿಕ ಎರಡು ಲೀಗಲ್ ಡೆಲಿವರಿ ಮಾಡಿದ್ದರು. ಇದಾದ ಮೇಲೆ ಮತ್ತೆ ಸತತವಾಗಿ 2 ವೈಡ್ ಎಸೆದರು. ಬಳಿಕ ಮತ್ತೆ ಎರಡು ಉತ್ತಮ ಎಸೆತ ಎದುರಿಸಿದರು. ಮತ್ತೆ ಒಂದು ವೈಡ್, ನೋ ಬಾಲ್ ಎಸೆದು ಒಟ್ಟು 11 ಬಾರಿ ಚೆಂಡು ಎಸೆಯುವಂತಾಯಿತು.
ಇದರೊಂದಿಗೆ ಅತ್ಯಂತ ದೀರ್ಘಾವಧಿಯ ಓವರ್ ಎಸೆದ ಬೇಡದ ದಾಖಲೆಯನ್ನು ಮೈಮೇಲೆಳೆದುಕೊಂಡಿದ್ದಾರೆ. ಈ ಹಿಂದೆ ಟೀಂ ಇಂಡಿಯಾದಲ್ಲೂ ಅವರು ಇಂತಹದ್ದೇ ಬೇಡದ ದಾಖಲೆ ಮಾಡಿ ಟ್ರೋಲ್ ಆಗಿದ್ದರು.