ನಾನು ಗಳಿಸಿದ ಶತಕಗಳಿಂದ ಮಿಲಿಯನ್ ಬಾರಿ ಈ ಸ್ಕೋರ್ ಶ್ರೇಷ್ಟ: ಡಿ ವಿಲಿಯರ್ಸ್

ಗುರುವಾರ, 26 ಮೇ 2016 (19:28 IST)
ಗುಜರಾತ್ ಲಯನ್ಸ್ ವಿರುದ್ಧ ತಮ್ಮ ಪಂದ್ಯ ಗೆಲುವಿನ 79 ರನ್ ಟೂರ್ನಮೆಂಟ್‌ನಲ್ಲಿ ತಾವು ಆಡಿರುವ ಅತ್ಯುತ್ತಮ ಬ್ಯಾಟಿಂಗ್ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಎಬಿ ಡಿ ವಿಲಿಯರ್ಸ್ ರೇಟಿಂಗ್ ನೀಡಿದ್ದಾರೆ.

 ತಾವು ಯಾವುದೇ ಶತಕ ಸಿಡಿಸಿದ್ದಕ್ಕಿಂತ ಇದು ಮಿಲಿಯನ್ ಬಾರಿ ಉತ್ತಮ. ನಾನು ಅಂಕಿಅಂಶಗಳ ಕಡೆ ಗಮನಹರಿಸುವುದಿಲ್ಲ. ನಾನು ಶತಕ ಅಥವಾ ದ್ವಿಶತಕಗಳ ಕಡೆ ಗಮನಹರಿಸುವುದಿಲ್ಲ. ನಾನು ಒತ್ತಡದ ಸನ್ನಿವೇಶದಲ್ಲಿ ಪಂದ್ಯ ಗೆಲ್ಲುವುದು ನನ್ನ ಬಯಕೆ. ಹಿಂದೆ ಒತ್ತಡದ ಸನ್ನಿವೇಶಗಳಲ್ಲಿ ಅನೇಕ ಬಾರಿ ವಿಫಲನಾಗಿದ್ದೆ. ಆದರೆ ಇಂದು ನನ್ನ ಅನುಭವ ನೆರವಿಗೆ ಬಂತು ಎಂದು ಡಿ ವಿಲಿಯರ್ಸ್ ಪ್ರತಿಕ್ರಿಯಿಸಿದ್ದಾರೆ. 
 
ಡಿ ವಿಲಿಯರ್ಸ್  ಇಕ್ಬಾಲ್ ಅಬ್ದುಲ್ಲಾ ಜತೆ 91 ರನ್ ಜತೆಯಾಟ ಮೂಲಕ ಆರ್‌ಸಿಬಿ ಗೆಲುವು ಗಳಿಸಿತ್ತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಮೋಘ ಬೆಂಬಲ ನೀಡಿದ ಪ್ರೇಕ್ಷಕ ವರ್ಗಕ್ಕೆ ಅವರು ಧನ್ಯವಾದ ಹೇಳಿದರು. 682 ರನ್‌ಗಳೊಂದಿಗೆ ಎಬಿ ಈ ಸೀಸನ್ ಅತ್ಯಧಿಕ ರನ್ ಸ್ಕೋರ್ ಮಾಡಿದವರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 919 ರನ್‍‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ