ಮದ್ರಾಸ್ ಹೈಕೋರ್ಟ್ ವಿಚಾರಣೆ ಆಧರಿಸಿ ಐಪಿಎಲ್ ಆಡಳಿತ ಮಂಡಳಿ ಮುಂದಿನ ಕ್ರಮ

ಗುರುವಾರ, 27 ಆಗಸ್ಟ್ 2015 (14:46 IST)
ಐಪಿಎಲ್ ಆಡಳಿತ ಮಂಡಳಿಯು ನಾಳೆ ಸಂಜೆ ಸಭೆ ಸೇರಲಿದ್ದು,  ಮದ್ರಾಸ್ ಹೈಕೋರ್ಟ್ ಅದೇ ದಿನದಂದು ಚೆನ್ನೈ ಸೂಪರ್ ಕಿಂಗ್ಸ್ ಅರ್ಜಿಯ ವಿಚಾರಣೆಯನ್ನು ನಡೆಸಲಿದ್ದು, ಆ ಅರ್ಜಿಯ ವಿಚಾರಣೆ  ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತದೆ. ಎಲ್ಲವೂ ಈಗ ಹೈಕೋರ್ಟ್ ವಿಚಾರಣೆ ಆಧರಿಸಿದೆ. ಮದ್ರಾಸ್ ಹೈಕೋರ್ಟ್ ಆದೇಶದ ಬಳಿಕ ನಾವು ಮುಂದಿನ ಹೆಜ್ಜೆ ಇರಿಸುತ್ತೇವೆ ಮತ್ತು ಕಾನೂನು ವಿಭಾಗ ಅದಕ್ಕೆ ಅನುಗುಣವಾಗಿ ಕೆಲಸ ಮಾಡುತ್ತದೆ ಎಂದು ಜಿಸಿ ಸದಸ್ಯ ಹೇಳಿದ್ದಾರೆ. 
 
ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎರಡು ವರ್ಷಗಳ ಕಾಲ ಐಪಿಎಲ್‌ನಿಂದ ಅಮಾನತುಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಚೆನ್ನೈ ಸೂಪರ್ ಕಿಂಗ್ಸ್ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿತ್ತು.
 
ಹೈಕೋರ್ಟ್ ಮೊದಲ ಪೀಠವು ಅರ್ಜಿಯನ್ನು ಪುರಸ್ಕರಿಸಿ ಬಿಸಿಸಿಐಗೆ ನೋಟಿಸ್ ನೀಡಿತ್ತು. ಬಿಸಿಸಿಐ ಕೊನೆಯ ಕಾರ್ಯಕಾರಿ ಸಮಿತಿ ಸಭೆ ಶುಕ್ರವಾರ ನಡೆಯಲಿದ್ದು, ಐಪಿಎಲ್ ವಿಷಯವು ಕಾರ್ಯಸೂಚಿ ಪಟ್ಟಿಯ 12ನೇ ವಿಷಯವಾಗಿದೆ. ಕಾರ್ಯಸೂಚಿಯಲ್ಲಿ ಎನ್‌ಸಿಎ, ಅಂಪೈರ್ಸ್, ಮಹಿಳಾ ಕ್ರಿಕೆಟರುಗಳಿಗೆ ಹಣಕಾಸು, ಕಾನೂನು, ಮಾರ್ಕೆಟಿಂಗ್ ಮತ್ತು ಸಹಾಯಕ ಸಮಿತಿಗಳು ಹೀಗೆ ನಾನಾ ವಿಷಯಗಳು ಒಳಗೊಂಡಿದೆ ಎಂದು ಸಿಎಬಿ ಅಧಿಕಾರಿ ತಿಳಿಸಿದರು. 

ವೆಬ್ದುನಿಯಾವನ್ನು ಓದಿ