ಐಪಿಎಲ್: ಚೆನ್ನೈಗೆ ಮೂರನೇ ಪ್ರಶಸ್ತಿ ಆದರೆ ಹರ್ಭಜನ್ ಗೆ ಮಾತ್ರ ನಾಲ್ಕನೇ ಚಾಂಪಿಯನ್ ಶಿಪ್!

ಸೋಮವಾರ, 28 ಮೇ 2018 (10:02 IST)
ನವದೆಹಲಿ: ಐಪಿಎಲ್ 11 ರ ಆವೃತ್ತಿಯ ಚಾಂಪಿಯನ್ ಆದ ಚೆನ್ನೈ ಸೂಪರ್ ಕಿಂಗ್ಸ್ ಮೂರನೇ ಬಾರಿಗೆ ಐಪಿಎಲ್ ಗೆದ್ದ ಸಾಧನೆ ಮಾಡಿತು. ಆದರೆ ಹರ್ಭಜನ್ ಸಿಂಗ್ ಅದೃಷ್ಟ ಹೇಗಿದೆ ನೋಡಿ.

ಧೋನಿಗೆ ಹ್ಯಾಟ್ರಿಕ್ ಐಪಿಎಲ್ ಚಾಂಪಿಯನ್ ಹಿರಿಮೆಯಾದರೆ ಹರ್ಭಜನ್ ಗೆ ನಾಲ್ಕನೇ ಪ್ರಶಸ್ತಿಯ ಸಂಭ್ರಮ! ಅವರ ಅದೃಷ್ಟವೆಂದೆರ ನಾಲ್ಕನೇ ಬಾರಿಗೆ ಐಪಿಎಲ್ ಗೆದ್ದ ತಂಡದ ಭಾಗವಾಗಿದ್ದಾರೆ.

ಚೆನ್ನೈಗಿಂತ ಮೊದಲು ಮುಂಬೈ ಇಂಡಿಯನ್ಸ್ ಮೂರು ಬಾರಿ ಐಪಿಎಲ್ ಗೆದ್ದಿತ್ತು. ಈ ಮೂರೂ ಬಾರಿಯೂ ಹರ್ಭಜನ್ ಮುಂಬೈ ತಂಡದ ಪರ ಆಡಿದ್ದರು. ಈ ಆವೃತ್ತಿಗೆ ಹರ್ಭಜನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದರು. ಅದೃಷ್ಟವೆಂದರೆ ಇದು ನಾಲ್ಕನೇ ಬಾರಿ ಅವರು ಐಪಿಎಲ್ ಗೆದ್ದ ತಂಡದ ಪಾಲಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ