ಐಪಿಎಲ್: ಚೆನ್ನೈ ಸೂಪರ್ ಕಿಂಗ್ಸ್ ಗೆ ದೊಡ್ಡ ಶಾಕ್!
ಪ್ರಮುಖ ಆಲ್ ರೌಂಡರ್ ಕೇದಾರ್ ಜಾದವ್ ಈ ಐಪಿಎಲ್ ಟೂರ್ನಿಯಿಂದ ಹೊರಬಿದ್ದ ಸಂಗತಿ ಚೆನ್ನೈ ಪಾಳಯದಿಂದ ಬಂದಿದೆ. ಮಂಡಿಭಾಗದ ಸ್ನಾಯುಗೆ ಗಾಯ ಮಾಡಿಕೊಂಡಿರುವ ಕೇದಾರ್ ಜಾದವ್ ಐಪಿಎಲ್ ನಿಂದ ಹೊರಬಿದ್ದಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಜಾದವ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದಿದ್ದರು. ಆದರೆ ಆಗಲೇ ಅವರು ನೋವು ಅನುಭವಿಸುತ್ತಿದ್ದರೂ ಗೆಲುವಿನ ಸಮೀಪದವರೆಗೂ ಬ್ಯಾಟಿಂಗ್ ಮಾಡಿದ್ದರು. ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟ್ಸ್ ಮನ್ ಆಗಿದ್ದ ಜಾದವ್ ಹೊರಬಿದ್ದಿರುವುದು ಚೆನ್ನೈಗೆ ದೊಡ್ಡ ನಷ್ಟವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.