ಜಿಂಬಾಬ್ವೆ ವಿರುದ್ಧ 331 ರನ್ ಸಿಡಿಸಿದ ಐರ್ಲೆಂಡ್

ಶನಿವಾರ, 7 ಮಾರ್ಚ್ 2015 (15:55 IST)
ಐರ್ಲೆಂಡ್ ಮತ್ತು ಜಿಂಬಾಬ್ವೆ ನಡುವೆ ಹೋಬಾರ್ಟ್ ಬೆಲ್ಲೆರಿವ್ ಓವಲ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ನ 30ನೇ ಪಂದ್ಯದಲ್ಲಿ ಐರ್ಲೆಂಡ್‌ನ ಇಡಿ ಜಾಯ್ಸ್ ಅವರ ಶತಕ ಮತ್ತು  ಆಂಡ್ರಿವ್ ಬಲ್‌ಬೀರ್ನಿ ಅವರ ಅಬ್ಬರದ 97 ರನ್ ನೆರವಿನಿಂದ  8 ವಿಕೆಟ್ ಕಳೆದುಕೊಂಡು 331 ರನ್‌ಗಳ ಭರ್ಜರಿ ಮೊತ್ತವನ್ನು ಐರ್ಲೆಂಡ್ ಕಲೆಹಾಕಿದೆ.

ಐರ್ಲೆಂಡ್ ಆಡಿದ ಮೂರು ಪಂದ್ಯಗಳಲ್ಲಿ 2ನ್ನು ಗೆದ್ದಿದ್ದು, ಈ ಪಂದ್ಯವನ್ನು ಕೂಡ ಗೆದ್ದು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸುವ ಎಲ್ಲಾ ಲಕ್ಷಣಗಳನ್ನು ತೋರಿಸಿದೆ.  ಜಾಯ್ಸ್ ಅವರ 112 ರನ್ ಶತಕದಲ್ಲಿ 9 ಬೌಂಡರಿಗಳು ಮತ್ತು 4 ಸಿಕ್ಸರುಗಳಿದ್ದವು. ಐರ್ಲೆಂಡ್ ಪರ ಆರಂಭದಲ್ಲೇ ಪಾಲ್ ಸ್ಟರ್ಲಿಂಗ್  ಪನ್ಯಂಗರಾಗೆ ಔಟ್ ಆದ ಬಳಿಕ  ಪೋರ್ಟರ್‌ಫೀಲ್ಡ್ ಮತ್ತು ಜಾಯ್ಸ್ 63 ರನ್ ಜೊತೆಯಾಟವಾಡಿದರು.

 20 ನೇ ಓವರಿನಲ್ಲಿ ಪೋರ್ಟರ್‌ಫೀಲ್ಡ್  ಸೀನ್ ವಿಲಿಯಮ್ಸ್ ಎಸೆತದಲ್ಲಿ ಮಸಾಕಾಡ್ಜಾಗೆ ಕ್ಯಾಚಿತ್ತು ಔಟಾದರು. ಐರ್ಲೆಂಡ್   2 ವಿಕೆಟ್‌ಗೆ 79 ರನ್ ಕಳೆದುಕೊಂಡ ಬಳಿಕ ಜಾಯ್ಸ್ ಮತ್ತು ಕೆವಿನ್ ಓ ಬ್ರೈನ್ ಅವರ ಉತ್ತಮ ಜೊತೆಯಾಟದಿಂದ ರನ್ ಹೊ ಳೆ ಹರಿಸಲಾರಂಭಿಸಿತು.

ಜಾಯ್ಸ್ ಅವರು ಚಟಾರಾ ಬೌಲಿಂಗ್‌ನಲ್ಲಿ ಔಟಾದಾಗ ಐರ್ಲೆಂಡ್ 3 ವಿಕೆಟ್ ಕಳೆದುಕೊಂಡು 217 ರನ್ ಗಳಿಸಿತ್ತು. ಆಂಡ್ರೀವ್ ಬಲಬೀರ್ನೀ 97 ರನ್‌ಗಳಾಗಿದ್ದಾಗ ರನ್ ಔಟ್ ಆಗುವ ಮೂಲಕ ಶತಕವಂಚಿತರಾದರು. ಅವರ ಬಿರುಸಿನ ಸ್ಕೋರಿನಲ್ಲಿ 7 ಬೌಂಡರಿಗಳು ಮತ್ತು 4 ಸಿಕ್ಸರುಗಳಿದ್ದವು. 

ವೆಬ್ದುನಿಯಾವನ್ನು ಓದಿ