21 ವರ್ಷದ ಮಾಡೆಲ್ ಸಫಾ ಬೇಗ್‌ರನ್ನು ವಿವಾಹವಾದ ಇರ್ಫಾನ್ ಪಠಾನ್

ಸೋಮವಾರ, 8 ಫೆಬ್ರವರಿ 2016 (16:07 IST)
ಭಾರತ ತಂಡದ ಕ್ರಿಕೆಟಿಗ ಇರ್ಫಾನ್ ಪಠಾನ್ ಪವಿತ್ರ ಸ್ಥಳವಾದ ಮೆಕ್ಕಾದ ಹರಾಮ್ ಷರೀಫ್‌ನಲ್ಲಿ ಮಾಡೆಲ್ ವೃತ್ತಿಯಲ್ಲಿರುವ 21 ವರ್ಷ ವಯಸ್ಸಿನ ಸಫಾ ಬೇಗ್‌ರನ್ನು ವಿವಾಹವಾಗಿದ್ದಾರೆ.
 
ಕಳೆದ ಎರಡು ವರ್ಷಗಳಿಂದ ಇರ್ಫಾನ್ ಮತ್ತು ಸಫಾ ಬೇಗ್ ಡೇಟಿಂಗ್‌ನಲ್ಲಿ ಬಿಜಿಯಾಗಿದ್ದರು. ಇದೀಗ ವಿವಾಹ ಬಂಧನಕ್ಕೊಳಗಾಗಿದ್ದಾರೆ.
 
ಇರ್ಫಾನ್ ಮತ್ತು ಸಫಾ ಎರಡು ವರ್ಷಗಳ ಹಿಂದೆ ದುಬೈನಲ್ಲಿ ಭೇಟಿಯಾಗಿದ್ದರು. ನಂತರ ಪರಿಚಯ ಸ್ನೇಹಕ್ಕೆ ತಿರುಗಿ ತದನಂತರ ಪ್ರೇಣ ಮೊಳಕೆಯೊಡೆದಿತ್ತು. ಮೂರು ತಿಂಗಳುಗಳ ಹಿಂದೆ ಸಫಾ ಬೇಗ್ ವಡೋದಾರಾಗೆ ಆಗಮಿಸಿ ಇರ್ಫಾನ್‌ ಪೋಷಕರನ್ನು ಭೇಟಿ ಮಾಡಿದ್ದಾಗ ವಿವಾಹ ದಿನಾಂಕವನ್ನು ಅಂತಿಮಗೊಳಿಸಲಾಗಿತ್ತು.
 
ವಿವಾಹ ಸಮಾರಂಭವನ್ನು ಸರಳವಾಗಿ ನೆರವೇರಿಸಲಾಯಿತು. ವಿವಾಹ ಕಾರ್ಯಕ್ರಮದಲ್ಲಿ ಇರ್ಫಾನ್ ಮತ್ತು ಸಫಾ ಬೇಗಿ ಕುಟುಂಬದ ಸದಸ್ಯರು ಮಾತ್ರ ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿವೆ.
 
ನಗರದಲ್ಲಿ ಐಷಾರಾಮಿ ಹೋಟೆಲ್ ಅಲ್-ಹಿಂದಾವಿಯಾನಲ್ಲಿ ಪಠಾನ್ ಕುಟುಂಬ ಡಿನ್ನರ್ ಏರ್ಪಡಿಸಿತ್ತು ಎಂದು ಪಠಾನ್ ಕುಟುಂಬದ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ