ಮುಂಬೈ: ಈ ಬಾರಿ ಐಪಿಎಲ್ ಟೂರ್ನಿ ಕಾಮೆಂಟಿ ಪ್ಯಾನೆಲ್ ನಲ್ಲಿ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಇರಲ್ಲ. ಇರ್ಫಾನ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು ಈ ಬಾರಿ ಕಾಮೆಂಟರಿ ಪ್ಯಾನೆಲ್ ನಿಂದ ಅವರನ್ನು ಹೊರಹಾಕಲಾಗಿದೆ.
ಇರ್ಫಾನ್ ಕಾಮೆಂಟರಿಯಲ್ಲಿ ಕೆಲವು ಭಾರತೀಯ ಆಟಗಾರರನ್ನೇ ನಿಂದಿಸುತ್ತಾರೆ. ಕೆಲವು ಆಟಗಾರರ ಬಗ್ಗೆ ಪಕ್ಷಪಾತಿಯಾಗಿ ಕಾಮೆಂಟರಿ ಮಾಡುತ್ತಾರೆ ಎಂಬ ಆರೋಪ ಕೇಳಿಬಂದಿದೆ. ವಿಶೇಷವಾಗಿ ಇತ್ತೀಚೆಗೆ ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳೆ ಅವರು ಕೆಲವು ಆಟಗಾರರನ್ನು ನಿಂದಿಸಿದ್ದು, ಇದರ ಬಗ್ಗೆ ಭಾರತೀಯ ಆಟಗಾರರೇ ಬಿಸಿಸಿಐಗೆ ದೂರು ನೀಡಿದ್ದರು ಎನ್ನಲಾಗಿದೆ.
ಈ ಕಾರಣಕ್ಕೆ ಇರ್ಫಾನ್ ರನ್ನು ಈ ಬಾರಿ ಐಪಿಎಲ್ ಪ್ಯಾನೆಲ್ ನಿಂದ ಹೊರಗಿಡಲಾಗಿದೆ. ಎಲ್ಲಾ ಸರಿ ಹೋಗಿದ್ದರೆ ಇರ್ಫಾನ್ ಈ ಬಾರಿಯೂ ಎಂದಿನಂತೆ ಐಪಿಎಲ್ ಕಾಮೆಂಟರಿ ಪ್ಯಾನೆಲ್ ನಲ್ಲಿರಬೇಕಿತ್ತು. ಆದರೆ ಅವರನ್ನು ಹೊರಗಿಡಲಾಗಿದೆ.
ಕೆಲವು ಆಟಗಾರರ ಮೇಲೆ ವೈಯಕ್ತಿಕ ವೈಷಮ್ಯವಿಟ್ಟುಕೊಂಡವರಂತೆ ಅವರು ಕಾಮೆಂಟರಿ ಮಾಡುತ್ತಾರೆ. ಅದೇ ಕಾರಣಕ್ಕೆ ಅವರನ್ನು ಹೊರಗಿಡಬೇಕು ಎಂದು ಒತ್ತಡ ಬಂದಿತ್ತು. ಈ ಕಾರಣಕ್ಕೆ ಅವರನ್ನು ಹೊರಹಾಕಲಾಗಿದೆ ಎಂಬ ಮಾತು ಕೇಳಿಬಂದಿದೆ.