ಪಂದ್ಯದ ಫಿನಿಷರ್ ಆಗಿದ್ದ ಧೋನಿ ನಿಜವಾಗಲೂ ಫಿನಿಷ್ ಮಾಡಿದರಾ?

ಸೋಮವಾರ, 12 ಅಕ್ಟೋಬರ್ 2015 (16:32 IST)
ಧೋನಿಯ ಹೆಲಿಕಾಪ್ಟರ್ ಶಾಟ್ ಕಣ್ಮರೆಯಾಗಿದೆ, ಈಗ ಅವರ ಬ್ಯಾಟಿನಿಂದ ಬೌಂಡರಿಗಳು ಹರಿದುಬರುತ್ತಿಲ್ಲ,  ಮುಂಚಿನ ರೀತಿಯಲ್ಲಿ ಧೋನಿ ಏಕಾಂಗಿಯಾಗಿ ಭಾರತವನ್ನು ದಡ ಮುಟ್ಟಿಸುತ್ತಿದ್ದ ಮಧ್ಯಮಕ್ರಮಾಂಕದ ಫಿನಿಷರ್ ಆಗಿ ಉಳಿದಿಲ್ಲ. ದೋನಿಯ ಅಪ್ಪಟ ಅಭಿಮಾನಿಗಳಿಗೆ ಕೂಡ ಧೋನಿ ಭಾನುವಾರದ ಏಕದಿನ ಪಂದ್ಯದಲ್ಲಿ  ತಿಣುಕುತ್ತಿರುವುದನ್ನು ನೋಡಿ ನೋವಾಗಿದೆ.
 
ಸಿಕ್ಸರ್ ಶಾಟ್ ಬಾರಿಸುವ ಮೂಲಕ ವಿನ್ನಿಂಗ್ ಶಾಟ್ ಹೊಡೆಯುತ್ತಿದ್ದ ಧೋನಿ ಅದನ್ನು 2011ರ ವಿಶ್ವಕಪ್‌ನಲ್ಲಿ ಪ್ರದರ್ಶಿಸುತ್ತಿದ್ದರು. ಆದರೆ ನಿನ್ನೆ ಅಂತಿಮ ಓವರುಗಳಲ್ಲಿ 31 ಎಸೆತಗಳಲ್ಲಿ ದೋನಿ ಒಂದು ಬೌಂಡರಿ ಮಾತ್ರ ಬಾರಿಸಲು ಸಾಧ್ಯವಾಯಿತು.
 
ನೀರಸ ಆಟ ಪ್ರದರ್ಶಿಸುತ್ತಿರುವ ಧೋನಿ ಮೇಲಿನ ಕ್ರಮಾಂಕದಲ್ಲಿ ಆಡುವ ಇಚ್ಛೆ ವ್ಯಕ್ತಿಪಡಿಸುವ ಮೂಲಕ ಅನೇಕ ಮಂದಿಯನ್ನು ಅಚ್ಚರಿಗೊಳಿಸಿದ್ದರು. ಆದರೆ ಅನಿಲ್ ಕುಂಬ್ಳೆ ಮಾತ್ರ ಧೋನಿ ಭಾರತದ ಉತ್ತಮ ಫಿನಿಷರ್ ಎಂದೇ ಭಾವಿಸಿದ್ದಾರೆ. ಧೋನಿಯನ್ನು ಭಿನ್ನ ಪಾತ್ರ ನಿಭಾಯಿಸಲು ನಾಲ್ಕನೇ ಕ್ರಮಾಂಕಕ್ಕೆ ದೂಡಬೇಕೆಂದು ನಾನು ಭಾವಿಸುವುದಿಲ್ಲ. ಅವರು ಈಗಲೂ ಉತ್ತಮ ಫಿನಿಷರ್ ಎಂದೇ ಕುಂಬ್ಳೆ ಹೇಳಿದ್ದಾರೆ. ಧೋನಿ ಒಂದು ಶಾಟ್ ಹೊಡೆದಿದ್ದರೆ ನಾವು ಭಿನ್ನವಾಗಿ ಮಾತನಾಡುತ್ತಿದ್ದೆವು ಎಂದು ಕುಂಬ್ಳೆ ಧೋನಿಯ ಪರ ವಹಿಸಿಕೊಂಡು ಹೇಳಿದ್ದಾರೆ. 
 
 ಧೋನಿ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಚೆಂಡು ಹೆಚ್ಚು ಪುಟಿಯದ ಬಗ್ಗೆ ದೂರಿದರು. ಇದು ಸುಲಭದ ಕೆಲಸವಾಗಿರಲಿಲ್ಲ. ಇದು ಸದಾ ನಿಮ್ಮ ಪರವಾಗಿ ಕೆಲಸ ಮಾಡುವುದಿಲ್ಲ. ಆಟವನ್ನು ಫಿನಿಷ್ ಮಾಡುವ ಜವಾಬ್ದಾರಿ ನನ್ನ ಮೇಲಿತ್ತು. ಅನೇಕ ಪಂದ್ಯಗಳಲ್ಲಿ ಉತ್ತಮ ಫಿನಿಷಿಂಗ್ ಮಾಡಿರುವ ಹಿನ್ನೆಲೆಯಲ್ಲಿ ನಾನು ಕೊನೆ ಮುಟ್ಟಿಸದ ಪಂದ್ಯಗಳನ್ನು ಮಾತ್ರ ಜನರು ನೆನಪಿಸಿಕೊಳ್ಳುತ್ತಾರೆ ಎಂದು ಧೋನಿ ಪ್ರತಿಕ್ರಿಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ