ಇಶಾಂತ್, ಧಾಮ್ಮಿಕಾ, ಚಾಂಡಿಮಾಲ್‌ ನಡುವೆ ಬಿಸಿ ಚಕಮಕಿ: ಐಸಿಸಿ ದಂಡ

ಮಂಗಳವಾರ, 1 ಸೆಪ್ಟಂಬರ್ 2015 (14:57 IST)
ಶ್ರೀಲಂಕಾ ಮತ್ತು ಭಾರತದ ನಡುವೆ ಮೂರನೇ ಟೆಸ್ಟ್ ನಾಲ್ಕನೇ ದಿನದಾಟದಲ್ಲಿ ಮಾತಿನ ಚಕಮಕಿಯಲ್ಲಿ ಒಳಗೊಂಡ ಇಶಾಂತ್ ಶರ್ಮಾ, ದಿನೇಶ್ ಚಾಂಡಿಮಾಲ್, ದಾಮ್ಮಿಕಾ ಪ್ರಸಾದ್ ಮತ್ತು ಲಾಹಿರು ತಿರಿಮನೆ ಅವರಿಗೆ ಐಸಿಸಿ ದಂಡ ವಿಧಿಸಲಿದೆ. ಮೂರನೇ ಟೆಸ್ಟ್ ಮುಗಿದ ಬಳಿಕ ತೀರ್ಪನ್ನು ಐಸಿಸಿ ಪ್ರಕಟಿಸಲಿದೆ.
 
ಧಾಮ್ಮಿಕಾ ಪ್ರಸಾದ್ ಮೂರು ಬೌನ್ಸ್ ಎಸೆತಗಳನ್ನು ಬೌಲ್ ಮಾಡಿದ ಬಳಿಕ ಇಶಾಂತ್ ಶರ್ಮಾ ಮತ್ತು ಶ್ರೀಲಂಕಾ ಫೀಲ್ಡರುಗಳ ನಡುವೆ ಬಿಸಿ ವಾಗ್ವಾದ ನಡೆದಿತ್ತು.  ಧಾಮ್ಮಿಕಾ ಬೌನ್ಸರ್ ಮಾಡಿದಾಗಲೆಲ್ಲಾ ಇಶಾಂತ್ ಅವರನ್ನು ದಿಟ್ಟಿಸಿ ನೋಡುತ್ತಿದ್ದರು. ಸಿಂಗಲ್ ರನ್ ಓಡಿದ ಇಶಾಂತ್ ತನ್ನ ಹೆಲ್ಮೆಟ್ ಕಡೆ ಕೈತೋರಿಸಿ ನಿನ್ನ ಗುರಿಗೆ ಹೊಡೆಯಲಾಗಲಿಲ್ಲ ಎಂದು ವ್ಯಂಗ್ಯಮಾಡಿದ್ದರು. 
 
ದಿನೇಶ್ ಚಾಂಡಿಮಾಲ್ ಬಳಿಕ ಶರ್ಮಾರನ್ನು ತಮ್ಮ ಭುಜದಿಂದ ಮುಟ್ಟಿದ್ದರು. ಅಂಪೈರ್‌ಗಳಾದ ನೈಜೆಲ್ ಲಾಂಗ್ ಮತ್ತು ರಾಡ್ ಟಕರ್ ಮಧ್ಯಪ್ರವೇಶಿಸಿ ಆಟಗಾರರನ್ನು ತಿಳಿಗೊಳಿಸಿದ್ದರು.

ಅಶ್ವಿನ್ ಔಟಾದ ಮೇಲೆ ಭಾರತದ ಇನ್ನಿಂಗ್ಸ್ ಕೊನೆಗೊಂಡಾಗ ಧಾಮ್ಮಿಕಾ ಇಶಾಂತ್ ಹಿಂದೆ ತೆರಳಿ ಡ್ರೆಸ್ಸಿಂಗ್ ರೂಂ ಹೊರಗೆ ಕಾವೇರಿದ ಚಕಮಕಿಯಲ್ಲಿ ತೊಡಗಿದ್ದರು. 
ಎರಡನೇ ಟೆಸ್ಟ್‌ನಲ್ಲಿ ದುರ್ವರ್ತನೆಗಾಗಿ  ಶೇ. 65ರಷ್ಟು ಪಂದ್ಯ ಶುಲ್ಕವನ್ನು ಇಶಾಂತ್‌ಗೆ ಇಶಾಂತ್‌ಗೆ ವಿಧಿಸಲಾಗಿತ್ತು. 

ವೆಬ್ದುನಿಯಾವನ್ನು ಓದಿ