ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಇಶಾಂತ್, ಪೂಜಾರಾಗೆ ಅಗ್ರ-20ರಲ್ಲಿ ಸ್ಥಾನ

ಬುಧವಾರ, 2 ಸೆಪ್ಟಂಬರ್ 2015 (20:08 IST)
ಟೀಂ ಇಂಡಿಯಾದ ವೇಗಿ ಇಶಾಂತ್ ಶರ್ಮಾ ಅವರು ಐಸಿಸಿ ಶ್ರೇಯಾಂಕದ ಬೌಲರ್‌ಗಳ ಪಟ್ಟಿಯಲ್ಲಿ  ಅಗ್ರ-20ರ ಸ್ಥಾನದೊಳಕ್ಕೆ ಜಿಗಿದಿದ್ದಾರೆ. ಚೇತೇಶ್ವರ ಪೂಜಾರಾ ಅವರು ಬ್ಯಾಟ್ಸ್‌ಮನ್ ಪಟ್ಟಿಯಲ್ಲಿ ಟಾಪ್ 20 ಸ್ಥಾನದಲ್ಲಿ ಪ್ರವೇಶಿಸಿದ್ದಾರೆ. ಭಾರತದ ಕ್ರಿಕೆಟರುಗಳು ಇತ್ತೀಚಿನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಶ್ರೀಲಂಕಾದಲ್ಲಿ ಸರಣಿ ಜಯ ಸಾಧಿಸಿದ ಬಳಿಕ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. 
 
ಕೊಲಂಬೊ ಟೆಸ್ಟ್ ಮುಗಿದ ಬಳಿಕ ಚೇತೇಶ್ವರ ಪೂಜಾರ್ ಟೆಸ್ಟ್ ಬ್ಯಾಟ್ಸ್‌ಮನ್ ವಿಭಾಗದಲ್ಲಿ ಟಾಪ್ 20 ಸ್ಥಾನದಲ್ಲಿ ಸೇರಿದ್ದಾರೆ.  27 ವರ್ಷದ ಬ್ಯಾಟ್ಸ್‌ಮನ್ ಮೊದಲ ಇನ್ನಿಂಗ್ಸ್‌ನಲ್ಲಿ ಅಜೇಯ 145 ರನ್ ಹೊಡೆದಿದ್ದರು. ಅವರ ಸಾಧನೆಯಿಂದಾಗಿ  ಶ್ರೇಯಾಂಕದಲ್ಲಿ ನಾಲ್ಕು ಸ್ಥಾನ ಜಿಗಿದಿದ್ದು, 20 ನೇ ಸ್ಥಾನದಲ್ಲಿ ಅವರನ್ನು ಇರಿಸಿದೆ. 
ಪೂಜಾರಾ ಈಗ್ ಟಾಪ್ 20ರಲ್ಲಿರುವ ಎರಡನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ವಿರಾಟ್ ಕೊಹ್ಲಿ ಈಗ 11ನೇ ಸ್ಥಾನಕ್ಕೆ ಕುಸಿದಿರುವುದರಿಂದ, ಟಾಪ್ 10ನೊಳಗೆ ಯಾವ ಭಾರತೀಯ ಬ್ಯಾಟ್ಸ್‌ಮನ್ ಹೆಸರಿಲ್ಲ.
 
ರೋಹಿತ್ ಶರ್ಮಾ ಅವರು 2 ಸ್ಥಾನ ಮೇಲೇರಿ 48ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅಶ್ವಿನ್ 5 ಸ್ಥಾನ ಮೇಲೆ ಜಿಗಿದು 50ನೇ ಸ್ಥಾನಕ್ಕೆ ತಲುಪಿದ್ದಾರೆ. ಅಮಿತ್ ಮಿಶ್ರಾ  91ನೇ ಸ್ಥಾನಕ್ಕೆ ತಲುಪಿದ್ದಾರೆ. ಟೆಸ್ಟ್ ಬೌಲರುಗಳಿಗೆ ಟಾಪ್ ಟೆನ್ ಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಶಾಂತ್ 8 ವಿಕೆಟ್ ಕಬಳಿಸಿದ್ದರಿಂದ ಮೂರು ಸ್ಥಾನ ಜಿಗಿದು 18ನೇ ಸ್ಥಾನಕ್ಕೆ ತಲುಪಿದ್ದಾರೆ. 

ವೆಬ್ದುನಿಯಾವನ್ನು ಓದಿ