ಸೋತ ಟೀಂ ಇಂಡಿಯಾದ ಈ ಇಬ್ಬರೂ ಆಟಗಾರರ ನಡುವೆ ನಡೆದಿತ್ತಾ ಬಹಿರಂಗ ಕಿತ್ತಾಟ?!

ಬುಧವಾರ, 19 ಡಿಸೆಂಬರ್ 2018 (09:36 IST)
ಪರ್ತ್: ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಸೋತಿರುವ ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿ ಇಲ್ಲವೇ? ನಾಲ್ಕನೇ ದಿನದಾಟದಲ್ಲಿ ನಡೆದ ಘಟನೆಯೊಂದು ಈ ವಿಚಾರಕ್ಕೆ ಇಂಬು ನೀಡಿದೆ.


ನಾಲ್ಕನೇ ದಿನ ರವೀಂದ್ರ ಜಡೇಜಾ ಬದಲಿ ಆಟಗಾರರಾಗಿ ಕ್ಷೇತ್ರ ರಕ್ಷಣೆಗೆ ಇಳಿದಿದ್ದರು. ಈ ವೇಳೆ ಬೌಲಿಂಗ್ ಮಾಡುತ್ತಿದ್ದ ಇಶಾಂತ್ ಶರ್ಮಾ ಜಡೇಜಾ ಬಳಿ ಫೈನ್ ಲೆಗ್ ಕ್ಷೇತ್ರದಲ್ಲಿ ಫೀಲ್ಡಿಂಗ್ ಮಾಡಲು ಹೇಳಿದರು.

ಆದರೆ ಜಡೇಜಾ ಇಶಾಂತ್ ಮಾತು ಕೇಳಲಿಲ್ಲ. ಇದರಿಂದ ಸಿಟ್ಟಿಗೆದ್ದ ಇಶಾಂತ್ ಮತ್ತು ಜಡೇಜಾ ನಡುವೆ ಮೈದಾನದಲ್ಲಿಯೇ ಕಿತ್ತಾಟ ನಡೆದ ಫೋಟೋ, ವಿಡಿಯೋಗಳು ಇದೀಗ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಅದೇನೇ ಇದ್ದರೂ ಸೋಲಿನ ಜತೆಗೆ ಟೀಂ ಇಂಡಿಯಾದ ಆಟಗಾರರೊಳಗೇ ಈ ರೀತಿ ಒಗ್ಗಟ್ಟಿನ ಕೊರತೆ ಇರುವುದು ತೀವ್ರ ಕಳವಳಕಾರಿ ಸಂಗತಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ