ಬಿಸಿಸಿಐ ಅಧ್ಯಕ್ಷರು ನಿಜವಾಗಿ ಯಾರು: ಸುಪ್ರೀಂಕೋರ್ಟ್ ಸಮಿತಿಗೆ ಅಚ್ಚರಿ

ಮಂಗಳವಾರ, 30 ಜೂನ್ 2015 (14:07 IST)
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿನ ಸ್ಪಾಟ್ ಫಿಕ್ಸಿಂಗ್ ಆರೋಪ ಕುರಿತು ತನಿಖೆ ನಡೆಸುತ್ತಿರುವ ಮೂವರು ನ್ಯಾಯಾಧೀಶರ ಸಮಿತಿ ಭಾರತೀಯ ಕ್ರಿಕೆಟ್ ಮಂಡಳಿಯಲ್ಲಿ ಯಾರು ನಿಜವಾಗಿ ಉಸ್ತುವಾರಿ ವಹಿಸಿದ್ದಾರೆಂದು ಅಚ್ಚರಿ ವ್ಯಕ್ತಪಡಿಸಿದೆ.
 
 ಸಮಿತಿ ಜೊತೆ ನಡೆದ ಭೇಟಿಯಲ್ಲಿ ಬಿಸಿಸಿಐ ಮುಖ್ಯಸ್ಥ ಜಗಮೋಹನ್ ದಾಲ್ಮಿಯಾ ಅವರ ಅಸಂಬದ್ಧ ಮತ್ತು ಅರ್ಥಮಾಡಿಕೊಳ್ಳಲಾಗದ ಮಾತುಗಳಿಂದ ಸಮಿತಿ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದೆ.
 
ಸಮಿತಿಯು ಮಾಜಿ ಮುಖ್ಯನ್ಯಾಯಮೂರ್ತಿ ಆರ್‌ಎಂ ಲೋಧಾ ಅವರು ಕೊಲ್ಕತಾದಲ್ಲಿ ದಾಲ್ಮಿಯಾರನ್ನು ಮಂಗಳವಾರ ಭೇಟಿ ಮಾಡಿದಾಗ ದಾಲ್ಮಿಯಾ ಅಸ್ವಸ್ಥರಾಗಿದ್ದರು. ದಾಲ್ಮಿಯಾ ಪುತ್ರ ಅಭಿಷೇಕ್ ಸಮಿತಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದಾಗ ಮಂಡಳಿಯ  ಅಧ್ಯಕ್ಷರು ಪರಿಪೂರ್ಣ ಮಾನಸಿಕ ಮತ್ತು ದೈಹಿಕ ಸ್ಥಿತಿಯಲ್ಲಿ ಇಲ್ಲದಿರುವಾಗ ಮಂಡಳಿಯನ್ನು ನಡೆಸುವುದು ಹೇಗೆ ಎಂದು ಅಚ್ಚರಿ ವ್ಯಕ್ತಪಡಿಸಿದರು. 
 
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪ ಕುರಿತು ತನಿಖೆಗೆ ಜನವರಿಯಲ್ಲಿ ನೇಮಕವಾದ ಸಮಿತಿ ಬಿಸಿಸಿಐ ಆಡಳಿತಾತ್ಮಕ ರಚನೆಯಲ್ಲಿ ಬದಲಾವಣೆಗಳಿಗೆ ಶಿಫಾರಸು ಮಾಡಲು ದೇಶದ ಅನೇಕ ಪ್ರಮುಖ ಕ್ರಿಕೆಟ್ ಆಡಳಿತಗಾರರ ಜೊತೆ ಚರ್ಚೆಯಲ್ಲಿ ತೊಡಗಿದೆ. ಮಾರ್ಚ್ 2ರಂದು ಅವಿರೋಧವಾಗಿ ಆಯ್ಕೆಯಾದ ದಾಲ್ಮಿಯಾ ಭಾರತೀಯ ಕ್ರಿಕೆಟ್ ಇಮೇಜ್ ಕ್ಲೀನ್ ಮಾಡುವುದಾಗಿ ತಿಳಿಸಿದ್ದರು.  ಆದರೆ ಅವರ ಪ್ರಸ್ತುತ ಆರೋಗ್ಯ ಸ್ಥಿತಿಯಿಂದ ಪ್ರಸಕ್ತ ಕ್ರಿಕೆಟ್ ಆಡಳಿತದ ಬಗ್ಗೆ ಸಮಿತಿಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.

ವೆಬ್ದುನಿಯಾವನ್ನು ಓದಿ