ಶ್ರೀಲಂಕಾದಲ್ಲಿ ಆಸ್ಟ್ರೇಲಿಯಾ ಕಳಪೆ ಪ್ರದರ್ಶನಕ್ಕೆ ಸದರ್‌ಲ್ಯಾಂಡ್ ನಿರಾಶೆ

ಮಂಗಳವಾರ, 23 ಆಗಸ್ಟ್ 2016 (20:16 IST)
ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾದ ಕಳಪೆ ಪ್ರದರ್ಶನವನ್ನು ಉದಾಹರಿಸಿದ ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಜೇಮ್ಸ್ ಸದರ್‌ಲ್ಯಾಂಡ್ ತಮ್ಮ ನಿರಾಶೆ ವ್ಯಕ್ತಪಡಿಸಿ, ತಂಡವು ದ್ವೀಪರಾಷ್ಟ್ರದಲ್ಲಿ ಮಾಮೂಲಿಗಿಂತ ಕೆಳಮಟ್ಟದ ಪ್ರದರ್ಶನ ನೀಡಿದ್ದಕ್ಕೆ ಕಾರಣವೇನೆಂದು ತಿಳಿಯಲು ಬಯಸುವುದಾಗಿ ಹೇಳಿದರು.
 
ಸ್ಟೀವನ್ ಸ್ಮಿತ್ ನೇತೃತ್ವದ ತಂಡವು ಆತಿಥೇಯರಿಗೆ 3-0ಯಿಂದ ವಾಷ್‌ಔಟ್ ಆಗಿತ್ತು. ತಂಡವು ಶ್ರೀಲಂಕಾಗೆ ಮುಂಚಿತವಾಗಿ ಆಗಮಿಸಿ ಅಭ್ಯಾಸ ನಡೆಸಿದ್ದರಿಂದ ತಂಡದ ಸಿದ್ಧತೆ ಕುರಿತು ಯಾವುದೇ ಅನುಮಾನವಿಲ್ಲ ಎಂದು ನಾಯಕ ಒಪ್ಪಿಕೊಂಡಿದ್ದರು.

ಸರಣಿಗೆ ಉತ್ತಮ ಅಡಿಪಾಯ ಹಾಕಿದ್ದರೂ ಪ್ರವಾಸಿ ತಂಡ ಸರಣಿಯ  4 ಇನ್ನಿಂಗ್ಸ್‌ಗಳಲ್ಲಿ 200 ರನ್ ಗಡಿಯನ್ನು ದಾಟಿರಲಿಲ್ಲ.
ಇತ್ತೀಚಿನ ವರ್ಷಗಳಲ್ಲಿ ನಮ್ಮ ಟೆಸ್ಟ್ ಕ್ರಿಕೆಟರುಗಳ ಪೈಕಿ ಕೆಲವರು ಭಾರತದಲ್ಲೆ ಹೆಚ್ಚು ಆಡಿ ಐಪಿಎಲ್ ಅನುಭವಗಳ ಮೂಲಕ ಉಪಖಂಡದ ಪರಿಸ್ಥಿತಿಗಳಿಗೆ ಹೊಂದಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಗಳಿಗೆ ನಾವು ಹೆಚ್ಚು ಪರಿಚಿತರಾಗಿದ್ದು, ಅದಕ್ಕೆ ಹೊಂದಿಕೊಳ್ಳುವ  ನಮ್ಮ ಸಾಮರ್ಥ್ಯವನ್ನು ಕುರಿತು ನಾನು ಹೆಚ್ಚು ತಿಳಿಯಲು ಆಸಕ್ತನಾಗಿರುವುದಾಗಿ ಸದರ್‌ಲೆಂಡ್ ಹೇಳಿದರು.
 
60 ವಿಕೆಟ್‌ಗಳ ಪೈಕಿ ಆಸ್ಟ್ರೇಲಿಯಾ 54 ವಿಕೆಟ್‌ಗಳನ್ನು ಸ್ಪಿನ್ನರುಗಳಿಗೆ ಕಳೆದುಕೊಂಡಿದೆ. ರಂಗನಾ ಹೆರಾತ್ ಒಬ್ಬರೇ 28 ವಿಕೆಟ್ ಕಬಳಿಸಿದರು. ಸ್ಪಿನ್ ಸ್ನೇಹಿ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಲ್ಲಿನ ಕೊರತೆ ಎಂದು ಕ್ರಿಕೆಟ್ ಪಂಡಿತರು ಹೇಳಿದ್ದಾರೆ. ಉತ್ತಮ ರಕ್ಷಣಾತ್ಮಕ ಆಟವಾಡುವಲ್ಲಿ ಅಸಾಮರ್ಥ್ಯದಿಂದ ಕೆಲವು ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ವಿಕೆಟ್ ಒಪ್ಪಿಸಿದ್ದಾರೆ. ಸದರ್‌ಲ್ಯಾಂಡ್ ಕೂಡ ಅದನ್ನು ಒಪ್ಪಿಕೊಂಡಿದ್ದು, ಸ್ವದೇಶದಿಂದ ಹೊರಗೆ ಗೆಲುವು ಗಳಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ