ಜಾಸನ್ ರಾಯ್ ಬಿರುಸಿನ 65 ರನ್, ಇಂಗ್ಲೆಂಡ್‌ಗೆ ಏಕದಿನದಲ್ಲಿ ಪಾಕ್ ವಿರುದ್ಧ ಜಯ

ಗುರುವಾರ, 25 ಆಗಸ್ಟ್ 2016 (12:17 IST)
ಮೈದಾನದಲ್ಲಿ ತಲೆಸುತ್ತು ಬರುತ್ತಿದ್ದರೂ ಚಿಕಿತ್ಸೆಯಿಂದ ನಿವಾರಿಸಿಕೊಂಡ ಇಂಗ್ಲೆಂಡ್ ಆಟಗಾರ ಜಾಸನ್ ರಾಯ್ ಬಿರುಸಿನ 65 ರನ್ ಸ್ಕೋರ್ ಮಾಡಿ ಇಂಗ್ಲೆಂಡ್ ತಂಡಕ್ಕೆ ಮೊದಲ ಏಕದಿನದಲ್ಲಿ ಜಯವನ್ನು ತಂದುಕೊಟ್ಟರು. ಪಾಕಿಸ್ತಾನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಟಾಪ್ ಸ್ಥಾನಕ್ಕೆ ಜಿಗಿದಿದ್ದರೂ ಏಕದಿನ ಸರಣಿಗಳಲ್ಲಿ ಕೆಳಗಿನ ಸ್ಥಾನದಲ್ಲೇ ಉಳಿದಿದ್ದು, ಇಂಗ್ಲೆಂಡ್ ವಿರುದ್ಧ ಸರಣಿ ಜಯಕ್ಕೆ ಪ್ರಯಾಸ ಪಡಬೇಕಾಗಿದೆ.

ಆಗಾಗ್ಗೆ ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾಗಿ ಡಕ್ ವರ್ತ್ ಲೂಯಿಸ್ ನಿಯಮವನ್ನು ಜಾರಿಗೆ ತರಲಾಯಿತು.  ಪಾಕಿಸ್ತಾನ 6 ವಿಕೆಟ್‌ಗೆ 260 ರನ್ ಸ್ಕೋರ್ ಮಾಡಿತ್ತು. ಆದರೆ ಮೂರನೇ ಬಾರಿ ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾಗಿದ್ದರಿಂದ ಇಂಗ್ಲೆಂಡ್ 194ಕ್ಕೆ 3 ವಿಕೆಟ್ ಗಳಿಸಿದ್ದಾಗ ಅಂಪೈರ್‌ಗಳು ಆಟವನ್ನು ಸ್ಥಗಿತಗೊಳಿಸಿ ಡಕ್‌ವರ್ತ್ ಲೂಯಿಸ್ ನಿಯಮದಡಿ ಇಂಗ್ಲೆಂಡ್ ಗೆಲುವನ್ನು ಘೋಷಿಸಿದರು.
 
ರಾಯ್(65) ಮತ್ತು ಜೋಯ್ ರೂಟ್(61)ಅವರ ಎರಡನೇ ವಿಕೆಟ್‌ಗೆ 89 ರನ್ ಜತೆಯಾಟದಿಂದ ಇಂಗ್ಲೆಂಡ್‌ ತಂಡವನ್ನು ಜಯದ ಗಡಿಯಲ್ಲಿ ತಂದಿರಿಸಿತ್ತು. ಜಾಸನ್ ರಾಯ್ ಅವರಿಗೆ ತಲೆನೋವು ಮತ್ತು ತಲೆಸುತ್ತು ಕಾಣಿಸಿಕೊಂಡು ಮೈದಾನದಲ್ಲೇ ಚಿಕಿತ್ಸೆ ನೀಡಿದಾಗ ಇಂಗ್ಲೆಂಡ್ ಪಾಳೆಯದಲ್ಲಿ ಕಳವಳ ಉಂಟಾಗಿತ್ತು.
 
ಮೊಹ್ಮದ್ ಅಮೀರ್ ಬೌಲಿಂಗ್‌‌ನಲ್ಲಿ ಟೆಸ್ಟ್ ಸರಣಿಯಲ್ಲಿ 5 ಕ್ಯಾಚ್ ಡ್ರಾಪ್ ಮಾಡಲಾಗಿತ್ತು.  ಪಾಕಿಸ್ತಾನ ವೇಗಿಯ ದುರಾದೃಷ್ಟ ಬುಧವಾರ ಕೂಡ ಮುಂದುವರಿದು ಅಮೀರ್ ವೇಗದ ಎಸೆತಕ್ಕೆ ಸ್ಕ್ವೇರ್‌ಲೆಗ್‌ನಲ್ಲಿದ್ದ ಗುಲ್ ಕಡೆಗೆ ಜಾಸನ್ ರಾಯ್  ಚೆಂಡನ್ನು ಹೊಡೆದಿದ್ದರು. ವಿಕೆಟ್ ಕೀಪರ್ ಕ್ಯಾಚ್‌ಗೆ ಎರಡೂ ಗ್ಲೌಸ್‌ಗಳಿಂದ ಯತ್ನಿಸಿದರೂ ವಿಫಲವಾದರು.
 
ಪಾಕಿಸ್ತಾನವು ಟೆಸ್ಟ್ ಶ್ರೇಯಾಂಕದಲ್ಲಿ ಟಾಪ್ ಸ್ಥಾನಕ್ಕೆ ಜಿಗಿದಿದ್ದರೂ, ಇಂತಹ ಫೀಲ್ಡಿಂಗ್ ದೋಷಗಳಿಂದ ಏಕ ದಿನ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಉಳಿದಿದೆ.
ಪಾಕಿಸ್ತಾನ 6 ವಿಕೆಟ್‌ಗೆ 260
ಸ್ಕೋರು ವಿವರ
ಅಜರ್ ಅಲಿ 82, ಬಾಬರ್ ಅಜಮ್ 40, ಸರ್ಫ್ರಾಜ್ ಅಹ್ಮದ್ 55.
25-1 (ಶಾರ್ಜೀಲ್ ಖಾನ್ 5.1), 52-2 (ಮೊಹಮ್ಮದ್ ಹಫೀಜ್, 12.2), 113-3 (ಬಾಬರ್ ಅಜಮ್, 23.6), 178-4 (ಅಝರ್ ಅಲಿ, 35.5), 224-5 (ಶೋಯಿಬ್ ಮಲಿಕ್ 43.5), 226-6 (ಸರ್ಫ್ರಾಜ್ ಅಹ್ಮದ್, 44.3)
 ಬೌಲಿಂಗ್ ವಿವರ
ಕ್ರೀಸ್ ವೋಕ್ಸ್ , ಮಾರ್ಕ್ ವುಡ್, ಪ್ಲಂಕಟ್, ಜೋಯ್ ರೂಟ್ ತಲಾ 1 ವಿಕೆಟ್, ಅದಿಲ್ ರಷೀದ್  2 ವಿಕೆಟ್.
 ಇಂಗ್ಲೆಂಡ್ 194ಕ್ಕೆ 3 ವಿಕೆಟ್
ಜಾಸನ್ ರಾಯ್ 65, ಜೋಯ್ ರೂಟ್ 61, ಮಾರ್ಗನ್ 33
ವಿಕೆಟ್ ಪತನ
27-1 (ಅಲೆಕ್ಸ್ ಹೇಲ್ಸ್, 4.3), 116-2 (ಜೇಸನ್ ರಾಯ್, 18.4), 158-3 (ಜೋ ರೂಟ್, 27.5)
ಬೌಲಿಂಗ್ ವಿವರ
 ಉಮರ್ ಗುಲ್ 1, ಮೊಹಮ್ಮದ್ ನವಾಜ್ 1 ವಿಕೆಟ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ