ಜಸ್ಪ್ರೀತ್ ಬುಮ್ರಾಗೆ ರಜೆ: ಎರಡನೇ ಏಕದಿನಕ್ಕೆ ಗೈರು
 
ಬುಮ್ರಾ ಇತ್ತೀಚೆಗಷ್ಟೇ  ಗಂಡು ಮಗುವಿಗೆ ತಂದೆಯಾಗಿದ್ದರು. ಏಷ್ಯಾ ಕಪ್ ಪಂದ್ಯಾವಳಿ ವೇಳೆ ಪತ್ನಿಯ ಹೆರಿಗೆ ವೇಳೆ ಜೊತೆಗಿರಲು ತಂಡದಿಂದ ಬ್ರೇಕ್ ಪಡೆದು ಭಾರತಕ್ಕೆ ಮರಳಿದ್ದರು. ಇದೀಗ ಆಸೀಸ್ ಸರಣಿಗೆ ಬುಮ್ರಾ ಆಯ್ಕೆಯಾಗಿರುವ ಬುಮ್ರಾ ಮೊದಲ ಪಂದ್ಯದಲ್ಲಿ ಆಡಿದ್ದಾರೆ.
									
				ಆದರೆ ಎರಡನೇ ಪಂದ್ಯದ ವೇಳೆ ಕುಟುಂಬದ ಜೊತೆಗಿರಲು ವೈಯಕ್ತಿಕ ಕಾರಣ ನೀಡಿ ಬ್ರೇಕ್ ಪಡೆದಿದ್ದಾರೆ. ಸೆಪ್ಟೆಂಬರ್ 27 ರಂದು ನಡೆಯುವ ಮೂರನೇ ಪಂದ್ಯದ ವೇಳೆ ಅವರು ವಾಪಸ್ ಆಗಲಿದ್ದಾರೆ.