ಕೊನೆಯ ಓವರಿನಲ್ಲಿ ಮನೋಜ್ಞ ಬೌಲಿಂಗ್ : ಡಿ ವಿಲಿಯರ್ಸ್‌ಗೆ ಕ್ರೆಡಿಟ್ ನೀಡಿದ ರಬಾಡಾ

ಸೋಮವಾರ, 12 ಅಕ್ಟೋಬರ್ 2015 (19:42 IST)
ತಮ್ಮ ಕೊನೆಯ ಓವರಿನಲ್ಲಿ ಮನೋಜ್ಞ ಬೌಲಿಂಗ್‌ಗೆ  ಹಿರಿಯ ಆಟಗಾರರ ಮಾರ್ಗದರ್ಶನ ಮತ್ತು ಸ್ಪಷ್ಟ  ಮನಸ್ಸು ಕಾರಣ ಎಂದು ಯುವ ದಕ್ಷಿಣ ಆಫ್ರಿಕಾ ವೇಗಿ ರಬಾಡಾ ಕ್ರೆಡಿಟ್ ನೀಡಿದ್ದಾರೆ.  ರಬಾಡಾ ಅವರ ಪರಿಕತ್ವತೆ ಮತ್ತು ಶಾಂತಚಿತ್ತತೆಯು ಲಿಮಿಟೆಡ್ ಓವರ್ ಫಿನಿಷರ್ ಧೋನಿಗೆ ಬೌಲಿಂಗ್ ಮಾಡುವಾಗ ಅನುಕರಣೀಯವಾಗಿತ್ತು. 
ನಾನು ಹಷೀಮ್ ಆಮ್ಲಾ ಮತ್ತು ಡಿವಿಲಿಯರ್ಸ್ ಅವರ ಮಾರ್ಗದರ್ಶನದಲ್ಲಿ ಬೌಲ್ ಮಾಡಿದೆ. ಇದು ತಂಡದ ಉತ್ತಮ ಬೌಲಿಂಗ್ ಪ್ರದರ್ಶನವಾಗಿತ್ತು ಎಂದು ರಬಾಡಾ ಅಭಿಪ್ರಾಯ ಪಟ್ಟರು. 
 
ಅಂತಿಮ ಓವರಿನಲ್ಲಿ ಟೀಂ ಇಂಡಿಯಾದ 11 ಓವರುಗಳನ್ನು ತಡೆಯಲು ತಾವಿರಿಸಿಕೊಂಡ ಭಾವನೆಗಳನ್ನು ಮತ್ತು ಚಿಂತನಾ ವಿಧಾನವನ್ನು 20 ವರ್ಷ ವಯಸ್ಸಿನ ರಬಾಡಾ ಬಿಚ್ಚಿಟ್ಟರು.
 
 ನಾನು ಡಿವಿಲಿಯರ್ಸ್‌ಗೆ ಕೊನೆಯ ಓವರಿನಲ್ಲಿ ಯಾರ್ಕರ್ ಬೌಲಿಂಗ್ ಮಾಡುವುದಾಗಿ ಹೇಳಿದಾಗ ಡಿ ವಿಲಿಯರ್ಸ್ ಬ್ಯಾಕ್ ಆಫ್ ಲೆಂಗ್ತ್ ಬೌಲಿಂಗ್ ಮಾಡಲು ಹೇಳಿದರು. ಈ ಯೋಜನೆ ಯಶಸ್ವಿಯಾಯಿತು ಎಂದು ರಬಾಡಾ ಹೇಳಿದರು. 
 
 ನಾನು ಆಟದಲ್ಲಿ ಇಷ್ಟೊಂದು ಒತ್ತಡವನ್ನು ಎಂದಿಗೂ ಅನುಭವಿಸಿರಲಿಲ್ಲ. ಕ್ರಿಕೆಟ್ ಆಡಿದ ಮಟ್ಟ ಮತ್ತು ಅಭಿಮಾನಿಗಳ ಸಂಖ್ಯೆ ಇದಕ್ಕೆ ಕಾರಣ. ಇದೊಂದು ಭಾವನಾತ್ಮಕ ಪಂದ್ಯ ಎಂದು ರಬಾಡಾ ಉದ್ಗರಿಸಿದರು. 

ವೆಬ್ದುನಿಯಾವನ್ನು ಓದಿ