ಕಾನ್ಪುರ ಏಕ ದಿನ ಪಂದ್ಯಕ್ಕೆ ನೀರಿನ ಸೀಸೆ, ಟಿಫಿನ್ ಬಾಕ್ಸ್‌ಗಳಿಗೆ ನಿಷೇಧ

ಬುಧವಾರ, 7 ಅಕ್ಟೋಬರ್ 2015 (16:05 IST)
ಮತ್ತು ದಕ್ಷಿಣ ಆಫ್ರಿಕಾ ನಡುವೆ ಕಟಕ್‌ನಲ್ಲಿ ನಡೆದ ಎರಡನೇ ಟಿ 20 ಅಂತಾರಾಷ್ಟ್ರೀಯ ಪಂದ್ಯಕ್ಕೆ ಅಡ್ಡಿಪಡಿಸಿದ ಗುಂಪಿನ ಅನುಚಿತ ವರ್ತನೆಯಿಂದ ಎಚ್ಚೆತ್ತುಕೊಂಡ ಕಾನ್ಪುರ ಪೊಲೀಸರು ಅಕ್ಟೋಬರ್ 11ರಂದು ಗ್ರೀನ್ ಪಾರ್ಕ್‌ನಲ್ಲಿ ನಡೆಯುವ ಆರಂಭದ ಏಕದಿನ ಪಂದ್ಯದಲ್ಲಿ ನೀರಿನ ಸೀಸೆಗಳನ್ನು ಟಿಫಿನ್‌ಗಳನ್ನು ತರುವುದಕ್ಕೆ ನಿಷೇಧಿಸಿದೆ. ಕಟಕ್‌ನಲ್ಲಿ ಗುಂಪಿನ ತೊಂದರೆಯಿಂದ ಪಂದ್ಯದ ಕೆಲವು ಸ್ಟಾಂಡ್‌ಗಳನ್ನು ಖಾಲಿ ಮಾಡಲಾಯಿತು.
 
 ಈ ಘಟನೆಯು ಕಾನ್ಪುರ ಆಡಳಿತವು ಪ್ರತಿಬಂಧಕ ಕ್ರಮಗಳನ್ನು ಕೈಗೊಂಡಿದ್ದು,  ಸ್ಟಾಂಡ್ ಎದುರು 10 ಅಡಿ ನೆಟ್ ಕಟ್ಟುವುದು ಕೂಡ ಸೇರಿದೆ. ಅಭಿಮಾನಿಗಳು ಎಸೆಯುವ ಯಾವುದೇ ವಸ್ತು ಮೈದಾನಕ್ಕೆ ಬೀಳದಂತೆ ಇದು ತಡೆಯುತ್ತದೆ.

 ನೀರಿನ ಸೀಸೆಗಳು, ಟಿಫಿನ್ ಬಾಕ್ಸ್‌ಗಳು ಮತ್ತು ಯಾವುದೇ ಲೋಹದ ವಸ್ತುಗಳನ್ನು ಸ್ಟೇಡಿಯಂ ಒಳಗೆ ಬಿಡುವುದಿಲ್ಲ ಎಂದು ಕಾನ್ಪುರ ಪೊಲೀಸ್ ಎಸ್‌‌‌ಎಸ್‍‌ಪಿ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ