ರವಿಶಾಸ್ತ್ರಿ ಸ್ಥಾನ ರಾಹುಲ್ ದ್ರಾವಿಡ್ ಗೆ ಕೊಡಬೇಕೇ? ಕಪಿಲ್ ದೇವ್ ಹೇಳಿದ್ದೇನು?
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಪಿಲ್ ದೇವ್ ಲಂಕಾ ಸರಣಿ ಮುಗಿಯುವವರೆಗೂ ಈ ಬಗ್ಗೆ ಚರ್ಚೆ ಬೇಡ. ಹೊಸ ಕೋಚ್ ಗೆ ಹುಡುಕಾಟ ನಡೆಸುವುದು ತಪ್ಪಲ್ಲ. ಒಂದು ವೇಳೆ ರವಿಶಾಸ್ತ್ರಿ ಒಳ್ಳೆಯ ಕೆಲಸ ಮಾಡಿದರೆ ಅವರನ್ನು ಮುಂದುವರಿಸುವುದರಲ್ಲಿ ತಪ್ಪಿಲ್ಲ. ಇದಕ್ಕೆಲ್ಲಾ ಕಾಲವೇ ಉತ್ತರ ಕೊಡಬೇಕು. ಅಲ್ಲಿಯವರೆಗೆ ಕೋಚ್, ಆಟಗಾರರ ಮೇಲೆ ಇಲ್ಲದ ಒತ್ತಡ ಹಾಕುವುದು ಬೇಡ ಎಂದಿದ್ದಾರೆ.