ರವಿಶಾಸ್ತ್ರಿ ಕೋಚ್ ಪಟ್ಟ ಕೊನೆಗೊಳ್ಳಲು ಕೆಲವೇ ದಿನ ಬಾಕಿ

ಸೋಮವಾರ, 5 ಜುಲೈ 2021 (09:00 IST)
ಮುಂಬೈ: ಟೀಂ ಇಂಡಿಯಾ ಕೋಚ್ ಆಗಿರುವ ರವಿಶಾಸ್ತ್ರಿ ಇದೀಗ ಕೆಲವೇ ತಿಂಗಳಲ್ಲಿ ತಮ್ಮ ಕೋಚ್ ಅವಧಿ ಪೂರ್ತಿ ಮಾಡಲಿದ್ದಾರೆ.


ಅಕ್ಟೋಬರ್ ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ವರೆಗೆ ರವಿಶಾಸ್ತ್ರಿ ಕೋಚ್ ಅವಧಿಯನ್ನು ಈ ಮೊದಲು ಬಿಸಿಸಿಐ ವಿಸ್ತರಿಸಿತ್ತು. ಅದಾದ ಬಳಿಕ ಮತ್ತೆ ಅವಧಿ ವಿಸ್ತರಣೆಯಾಗುತ್ತಾ, ಹೊಸ ಕೋಚ್ ನೇಮಕವಾಗುತ್ತಾ ಕಾದು ನೋಡಬೇಕಿದೆ.

ಒಂದು ವೇಳೆ ಟೀಂ ಇಂಡಿಯಾ ಈ ಬಾರಿ ವಿಶ್ವಕಪ್ ಕೂಟ ಗೆದ್ದರೆ ರವಿಶಾಸ್ತ್ರಿ ಅದೃಷ್ಟ ಮುಂದುವರಿಯಬಹುದು. ಸೋತರೆ ಅವರು ಸ್ಥಾನ ಕಳೆದುಕೊಳ್ಳಬಹುದು. ಯಾಕೆಂದರೆ ಈಗಾಗಲೇ ಅವರ ನೇತೃತ್ವದಲ್ಲಿ ಐಸಿಸಿ ಕೂಟಗಳಲ್ಲಿ ಟೀಂ ಇಂಡಿಯಾ ಕಳಪೆ ಸಾಧನೆ ನೋಡಿ ಹಲವರು ಅವರನ್ನು ಕೋಚ್ ಹುದ್ದೆಯಿಂದ ಕಿತ್ತೊಗೆಯಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಹೀಗಾಗಿ ಈ ವರ್ಷದ ಟಿ20 ವಿಶ್ವಕಪ್ ರವಿಶಾಸ್ತ್ರಿ ಪಾಲಿಗೂ ಅಗ್ನಿಪರೀಕ್ಷೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ