ಈ ಅಶ್ವಿನ್ ದಾಳಿಗೆ ಕುಸಿದ ಕರ್ನಾಟಕ

ಶುಕ್ರವಾರ, 23 ಡಿಸೆಂಬರ್ 2016 (16:51 IST)
ವಿಶಾಖಪಟ್ಟಣ: ಶತಕ, ತ್ರಿಶತಕದಾರಿಗಳು ತಂಡದಲ್ಲಿದ್ದರೂ ಕರ್ನಾಟಕ ತಂಡ ಮೇಲೇಳಲಿಲ್ಲ. ಬದಲಾಗಿ ಲೀಗ್ ಪಂದ್ಯಕ್ಕಿಂತಲೂ ನಿಕೃಷ್ಟ ಬ್ಯಾಟಿಂಗ್ ಪ್ರದರ್ಶನ ನೀಡಿತು. ಇದು ತಮಿಳುನಾಡು ವಿರುದ್ಧ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದ ಮೊದಲ ದಿನದ ವರದಿ.


ತಮಿಳುನಾಡು ತಂಡದ ಅಶ್ವಿನ್ ಕರ್ನಾಟಕದ ಬೆನ್ನುಲುಬು ಮುರಿದ ಬ್ಯಾಟ್ಸ್ ಮನ್. ಆದರೆ ಈ ಅಶ್ವಿನ್ ಟೀಂ ಇಂಡಿಯಾ ಅಶ್ವಿನ್ ಅಲ್ಲ. ಅಶ್ವಿನ್ ಕ್ರಿಸ್ಟ್ ಕರ್ನಾಟಕದ ಪ್ರಮುಖ ಆರು ವಿಕೆಟ್ ಕಿತ್ತರು. ಕೆಎಲ್ ರಾಹುಲ್ ಕೇವಲ 4 ರನ್, ಮನೀಶ್ ಪಾಂಡೆ 28 ಮತ್ತು ತ್ರಿಶತಕದಾರಿ ಕರುಣ್ ನಾಯರ್ ಕೇವಲ 14 ರನ್ ಗಳಿಗೆ ಪೆವಿಲಿಯನ್ ಸೇರಿಕೊಂಡರು. ಪರಿಣಾಮ ಕರ್ನಾಟಕ ಜುಜುಬಿ 88 ರನ್ ಗೆ ಆಲೌಟ್ ಆಯಿತು.

ಮರಳಿ ಬ್ಯಾಟಿಂಗ್ ಆರಂಭಿಸಿದ ತಮಿಳುನಾಡು ದಿನದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿದೆ. ಇದರೊಂದಿಗೆ 23 ರನ್ ಗಳ ಮುನ್ನಡೆ ಪಡೆದಿದೆ. ದಿನೇಶ್ ಕಾರ್ತಿಕ್ 31 ಮತ್ತು ಅಭಿನವ್ ಮುಕುಂದ್ 34 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.  ಮಂದ ಬೆಳಕಿನ ಪರಿಣಾಮ ಬೇಗನೇ ದಿನದಂತ್ಯ ಆಟ ನಿಲ್ಲಿಸಲಾಯಿತು. ಕರ್ನಾಟಕ ಆದಷ್ಟು ಬೇಗ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ