ಸಿಕ್ಕಿದ ಅವಕಾಶ ಸದ್ಭಳಕೆ ಮಾಡಲು ಕರ್ನಾಟಕ ಕ್ರಿಕೆಟರ್‌ಗಳ ನಿರ್ಧಾರ

ಬುಧವಾರ, 1 ಜುಲೈ 2015 (13:35 IST)
ಭಾರತ ಮತ್ತು ಭಾರತ ಎ ತಂಡಗಳಿಗೆ ಆಯ್ಕೆಯಾದ ಕರ್ನಾಟಕ ಕ್ರಿಕೆಟರ್‌ಗಳು ತಮಗೆ ಸಿಕ್ಕಿದ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಜಿಂಬಾಬ್ವೆ ಪ್ರವಾಸಕ್ಕೆ ಭಾರತದ ಏಕದಿನ ತಂಡದಲ್ಲಿ ಮತ್ತು ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಭಾರತ ಎ ತಂಡಕ್ಕೆ ಒಟ್ಟು  ಕರ್ನಾಟಕದ ಏಳು ಆಟಗಾರರನ್ನು ಆಯ್ಕೆ ಮಾಡಲಾಗಿದೆ.
 
 ರಾಬಿನ್ ಉತ್ತಪ್ಪಾ, ಮನೀಶ್ ಪಾಂಡೆ ಮತ್ತು ಸ್ಟುವರ್ಟ್ ಬಿನ್ನಿ ಅವರು ಅಜಿಂಕ್ಯಾ ರಹಾನೆ ನೇತೃತ್ವದ ಭಾರತ ತಂಡದಲ್ಲಿರುವ 15 ಮಂದಿ ತಂಡಕ್ಕೆ ಆಯ್ಕೆಯಾಗಿದ್ದಾರೆ ಮತ್ತು ಲೋಕೇಶ್ ರಾಹುಲ್, ಕರುಣ್ ನಾಯರ್, ಶ್ರೇಯಾಸ್ ಗೋಪಾಲ್ ಮತ್ತು ಅಭಿಮನ್ಯು ಮಿಷನ್ ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದಾರೆ. 
ಕರ್ನಾಟಕ ತಂಡವು ರಣಜಿ ಟ್ರೋಫಿ, ಇರಾನಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯನ್ನು 2013-14ರಲ್ಲಿ ಗೆದ್ದಿತ್ತು ಮತ್ತು ಕಳೆದ ಸೀಸನ್‌ನಲ್ಲಿ ಕೂಡ ಅಭೂತಪೂರ್ವ ಹ್ಯಾಟ್ರಿಕ್ ಪುನರಾವರ್ತನೆ ಮಾಡಿತ್ತು.
 
ಆಸ್ಟ್ರೇಲಿಯಾದಲ್ಲಿ ಕಳೆದ ವರ್ಷ ಭಾರತ ಎ ತಂಡದ ಕಳಪೆ ಪ್ರದರ್ಶನದಿಂದ ಉತ್ತಪ್ಪಾ ಅವರನ್ನು ಆಯ್ಕೆದಾರರ ರೆಡಾರ್ ಪಟ್ಟಿಯಿಂದ ತೆಗೆಯಲಾಗಿತ್ತು. ತಾವು ಈ ಅವಕಾಶ ಸದ್ಭಳಕೆ ಮಾಡಿಕೊಳ್ಳುವುದಾಗಿ ಉತ್ತಪ್ಪಾ ತಿಳಿಸಿದರು. 
 
ಕಳೆದ ಎರಡು ವರ್ಷಗಳಲ್ಲಿ ನಾವು 6 ಟ್ರೋಫಿಗಳನ್ನು ಗೆದ್ದಿದ್ದೇವೆ. ಆದರೆ ದೇಶಕ್ಕೆ ಒಬ್ಬರು ಅಥವಾ ಇಬ್ಬರು ಮಾತ್ರ ಪ್ರತಿನಿಧಿಸುತ್ತಿದ್ದರು. ಆದರೆ ಈ ಬಾರಿ ನಮ್ಮ ಪೈಕಿ ಅನೇಕ ಮಂದಿ ರಾಷ್ಟ್ರೀಯ ತಂಡಕ್ಕೆ ಮತ್ತು ಎ ತಂಡಕ್ಕೆ ಆಯ್ಕೆಯಾಗಿರುವುದು ಸಂತೋಷ ತಂದಿದೆ ಎಂದು ಉತ್ತಪ್ಪ ಹೇಳಿದರು.  ಕರ್ನಾಟಕದ ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ನೀಡಿ ತಮ್ಮ ಸಾಮರ್ಥ್ಯ ರುಜುವಾತು ಮಾಡುತ್ತಾರೆಂದು ಉತ್ತಪ್ಪಾ ವಿಶ್ವಾಸ ವ್ಯಕ್ತಪಡಿಸಿದರು. 

ವೆಬ್ದುನಿಯಾವನ್ನು ಓದಿ