ತನ್ನ ಸ್ಥಾನಕ್ಕೆ ಲಕ್ನೋ ತಂಡದಲ್ಲಿ ಗೆಳೆಯನಿಗೆ ಚಾನ್ಸ್ ಕೊಟ್ಟ ಕೆಎಲ್ ರಾಹುಲ್
ಆದರೆ ಲಕ್ನೋ ನಾಯಕ ಟೂರ್ನಿಯಿಂದ ಹೊರ ನಡೆಯುವ ಮೊದಲು ತಮ್ಮ ಗೆಳೆಯನಿಗೆ ಸಹಾಯ ಮಾಡಿದ್ದಾರೆ. ಕರ್ನಾಟಕದ ಕರುಣ್ ನಾಯರ್ ಗೆ ಲಕ್ನೋ ತಂಡದಲ್ಲಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ರಾಹುಲ್ ಸ್ಥಾನಕ್ಕೆ ಲಕ್ನೋ ತಂಡಕ್ಕೆ ಕರುಣ್ ನಾಯರ್ ಆಯ್ಕೆಯಾಗಿದ್ದಾರೆ. ಕೆಲವು ದಿನಗಳ ಮೊದಲು ಕರುಣ್ ಡಿಯರ್ ಕ್ರಿಕೆಟ್ ನನಗೆ ಇನ್ನೊಂದು ಚಾನ್ಸ್ ಕೊಡು ಎಂದು ಟ್ವೀಟ್ ಮಾಡಿದ್ದು ನೆಟ್ಟಿಗರ ಮನಕರಗಿಸಿತ್ತು. ಟೆಸ್ಟ್ ಕ್ರಿಕೆಟ್ ನಲ್ಲಿ ಸೆಹ್ವಾಗ್ ಬಳಿಕ ತ್ರಿಶಕ ಸಿಡಿಸಿದ ಏಕೈಕ ಕ್ರಿಕೆಟಿಗರಾಗಿರುವ ಕರುಣ್ ಇತ್ತೀಚೆಗೆ ರಾಷ್ಟ್ರೀಯ ತಂಡದಲ್ಲಿ, ಐಪಿಎಲ್ ನಲ್ಲಿ ಅವಕಾಶವಿಲ್ಲದೇ ಕೊರಗುತ್ತಿದ್ದರು. ಅಂತಹ ಗೆಳೆಯನಿಗೆ ರಾಹುಲ್ ಸಹಾಯ ಮಾಡಿದ್ದಾರೆ.