ಟೆಂಪಲ್ ರನ್ ಮಾಡಿರುವ ಕೊಹ್ಲಿ: ಇಂದು ಶತಕ ಗ್ಯಾರಂಟಿ ಅಂತಿದ್ದಾರೆ ಫ್ಯಾನ್ಸ್!
ಕೊಹ್ಲಿ ಮಹತ್ವದ ಪಂದ್ಯಕ್ಕೆ ಮೊದಲು ದೇವಾಲಯಕ್ಕೆ ಭೇಟಿ ಕೊಟ್ಟಾಗಲೆಲ್ಲಾ ಭರ್ಜರಿ ಇನಿಂಗ್ಸ್ ಆಡಿದ್ದಾರೆ. ಇದೀಗ ಅನುಷ್ಕಾ ಶರ್ಮಾ ಹುಟ್ಟುಹಬ್ಬ ನಿಮಿತ್ತ ಕೊಹ್ಲಿ ದಂಪತಿ ದೇವಾಲಯವೊಂದಕ್ಕೆ ಭೇಟಿ ಕೊಟ್ಟಿದ್ದಾರೆ.
ಇಂದು ತವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ ಸಿಬಿ ಮಹತ್ವದ ಪಂದ್ಯವಾಡಲಿದ್ದು, ಕೊಹ್ಲಿ ಶತಕ ಸಿಡಿಸಬಹುದು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಕಳೆದ ಪಂದ್ಯದಲ್ಲಿ ಗೌತಮ್ ಗಂಭೀರ್ ಜೊತೆಗಿನ ಘರ್ಷಣೆ ಬಳಿಕ ಕೊಹ್ಲಿ ಈಗ ಅಗ್ರೆಸಿವ್ ಮೂಡ್ ನಲ್ಲಿದ್ದಾರೆ. ಹೀಗಾಗಿ ಕೊಹ್ಲಿಯಿಂದ ಇಂದು ತವರಿನಲ್ಲಿ ಭರ್ಜರಿ ಇನಿಂಗ್ಸ್ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.