ಶ್ರೀಶಾಂತ್ ವಿರುದ್ಧ ನಿಷೇಧ ತೆರವಿಗೆ ಕೆಸಿಎನಿಂದ ಬಿಸಿಸಿಐಗೆ ಪತ್ರ

ಸೋಮವಾರ, 27 ಜುಲೈ 2015 (13:58 IST)
ಕೇರಳ ಕ್ರಿಕೆಟ್ ಸಂಸ್ಥೆ ಮಾಜಿ ವೇಗಿ ಎಸ್.ಶ್ರೀಶಾಂತ್ ಮೇಲೆ ಹೇರಲಾಗಿರುವ ನಿಷೇಧವನ್ನು ತೆರವು ಮಾಡಬೇಕೆಂದು ಬಿಸಿಸಿಐಗೆ ಪತ್ರ ಬರೆಯಲಿದೆ. ದೆಹಲಿ ಹೈಕೋರ್ಟ್ ವೇಗಿ ಶ್ರೀಶಾಂತ್ ವಿರುದ್ಧ ಆರೋಪಗಳನ್ನುಕೈಬಿಟ್ಟು ದೋಷಮುಕ್ತಗೊಳಿಸಿದ ಬಳಿಕ  ಬಿಸಿಸಿಐ ಉಪಾಧ್ಯಕ್ಷರೂ ಕೂಡ ಆಗಿರುವ ಕೆಸಿಎ ಅಧ್ಯಕ್ಷ ಟಿ.ಸಿ ಮ್ಯಾಥೀವ್ ಮಂಡಳಿಗೆ ಪತ್ರ ಬರೆಯಲಿದ್ದಾರೆ. 
 
ನಾವು ನಿಷೇಧವನ್ನು ತೆರವು ಮಾಡಲು ಬಿಸಿಸಿಐಗೆ ಮನವಿ ಸಲ್ಲಿಸಲಿದ್ದೇವೆ. ಕೋರ್ಟ್ ಶ್ರೀಶಾಂತ್ ಅವರಿಗೆ ಕ್ಲೀನ್ ಚಿಟ್ ನೀಡಿರುವುದರಿಂದ ನಾವು ಬಿಸಿಸಿಐಗೆ ಬರೆಯಲಿದ್ದೇವೆ ಎಂದು ಕೆಸಿಎ ಕಾರ್ಯದರ್ಶಿ ಟಿ.ಎನ್. ಅನಂತನಾರಾಯಣ್ ತಿಳಿಸಿದರು.
 
ಶ್ರೀಶಾಂತ್ ವಿರುದ್ಧ ನಿಷೇಧವನ್ನು ತೆರವು ಮಾಡಬೇಕೆಂದು ಪತ್ರ ಬರೆದ ಬಳಿಕ ಬಿಸಿಸಿಐನಿಂದ ಪ್ರತಿಕ್ರಿಯೆಗೆ ಕೆಸಿಎಗೆ ಕಾಯುವುದಾಗಿ ಪ್ರಸಕ್ತ ಬೆಂಗಳೂರಿನಲ್ಲಿರುವ ಮ್ಯಾಥೀವ್ ಹೇಳಿದ್ದಾರೆ. ಕೆಸಿಎ ಪದಾಧಿಕಾರಿಗಳ ನಿಯೋಗವು ಬಿಸಿಸಿ ಉನ್ನತಾಧಿಕಾರಿಗಳನ್ನು ಭೇಟಿ ಮಾಡಬಹುದು ಎಂದು ಕೆಸಿಎ ಅಧಿಕಾರಿಗಳು ತಿಳಿಸಿದ್ದಾರೆ.  ಕೋರ್ಟ್ ತೀರ್ಪಿನ ಬಳಿಕ , ಮೂವರು ಕ್ರಿಕೆಟಿಗರ ವಿರುದ್ಧ ನಿಷೇಧವನ್ನು ಸದ್ಯಕ್ಕೆ ತೆಗೆಯುವುದಿಲ್ಲ ಎಂದು ಬಿಸಿಸಿಐ ಹೇಳಿತ್ತು. 

ವೆಬ್ದುನಿಯಾವನ್ನು ಓದಿ